ಬೆಂಗಳೂರು, ಆ. 15 (DaijiworldNews/AK): ರಾಜ್ಯದಲ್ಲಿ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲಾಗಿದೆ. ಸಾರಿಗೆ ಇಲಾಖೆ ದರ ಏರಿಕೆ ಆದೇಶವನ್ನು ಪ್ರಕಟಿಸಿದೆ.

ವಾಯು ಮಾಲಿನ್ಯ ಪರಿವೀಕ್ಷಣಾ ಕೇಂದ್ರಗಳಲ್ಲಿ ಪಿಯುಸಿ ಪತ್ರ ನೀಡುವಾಗ ನಡೆಯುವ ಪರೀಕ್ಷಾ ಶುಲ್ಕದಲ್ಲಿ ಪರಿಷ್ಕರಣೆ ಆಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ
ದ್ವಿಚಕ್ರ ವಾಹನ: 65 ರೂ.ನಿಂದ 80 ರೂ.ಗೆ ಏರಿಕೆ
ಆಟೋರಿಕ್ಷಾ: 75 ರೂ. – 80 ರೂ.
ಪೆಟ್ರೋಲ್, ಎಲ್ಪಿಜಿ ಮತ್ತು ಸಿಎನ್ಜಿ ಚಾಲಿತ ಕಾರು: 115 ರೂ. – 150 ರೂ.
ಡೀಸೆಲ್ ಚಾಲಿತ ವಾಹನ: 160 ರೂ. – 200 ರೂ.