ನವದೆಹಲಿ, ಸೆ.12 (DaijiworldNews/AA): ಕಳೆದ ಐದು ವರ್ಷಗಳಲ್ಲಿ ವಿಶ್ವದ ಜಿಡಿಪಿಯ ಶೇ. 40ಕ್ಕೂ ಹೆಚ್ಚು ಪಾಲು ಬ್ರಿಕ್ಸ್ ರಾಷ್ಟ್ರಗಳಿಂದ ಉತ್ಪಾದನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಬ್ರಿಕ್ಸ್ ಬಿಸಿನೆಸ್ ಫೋರಂನ್ನುದ್ದೇಶಿಸಿ ಮಾತನಾಡಿದ ಅವರು, "ಬ್ರಿಕ್ಸ್ ತನ್ನ ಮೂರನೇ ದಶಕಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಪ್ರಮುಖ 10 ವ್ಯಾಪಾರ ಅಡೆತಡೆಗಳನ್ನು ನಿವಾರಿಸುವ ಕುರಿತು ವರದಿಯೊಂದನ್ನು ಸಿದ್ಧಪಡಿಸಲು ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮುಂದಾಗಬಹುದೇ? ಇತರ ಬ್ರಿಕ್ಸ್ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಪ್ರತಿ ವರ್ಷ 100 ಬ್ರಿಕ್ಸ್ ಸ್ಟಾರ್ಟ್ಅಪ್ಗಳಿಗೆ ನಾವು ನೆರವು ನೀಡಬಹುದೇ? ನಮ್ಮ ಉದ್ಯಮಗಳ ನಡುವೆ 1,000 ಹೊಸ ಪಾಲುದಾರಿಕೆಗಳನ್ನು ರೂಪಿಸಬಹುದೇ? ಈ ಮೂರು ಮಾನದಂಡಗಳ ಆಧಾರದಲ್ಲಿ ನಮ್ಮ ಪ್ರಗತಿಯನ್ನು ಪ್ರತಿವರ್ಷ ಪರಿಶೀಲಿಸಬೇಕು" ಎಂದರು.
"ಬ್ರಿಕ್ಸ್ನ ಆರ್ಥಿಕ ಶಕ್ತಿ ವಿಶ್ವದ ಉಳಿದ ಭಾಗಕ್ಕಿಂತ ಸುಮಾರು ಎರಡು ಪಟ್ಟು ವೇಗದಲ್ಲಿ ಬೆಳೆಯುತ್ತಿದೆ. ಬ್ರಿಕ್ಸ್ ರಾಷ್ಟ್ರಗಳು ನಾವೀನ್ಯತೆ ಮತ್ತು ಪರಿಹಾರಗಳ ಹೊಸ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಆದರೆ ಜಿ7 ಎಂದು ಕರೆಯಲ್ಪಡುವ 'ಗ್ರೂಪ್ ಆಫ್ ಸೆವೆನ್' ಅದನ್ನು ಏಕೆ 'ಗ್ರೂಪ್ ಆಫ್ ಸೆವೆನ್' ಎಂದು ಕರೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಅದರ ಪಾಲು ಕೇವಲ ಶೇ. 29 ರಷ್ಟಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.