ನವದೆಹಲಿ, ಸೆ 14 (Daijiworld News/RD): ಯುರೋಪ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದ 100 ದೇಶಗಳಿಗೆ ಭಾರತ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಭಾರತೀಯ ಗುಣಮಟ್ಟಸಂಸ್ಥೆ ಬಿಐಎಸ್ ತಿಳಿಸಿದೆ.
ಈ ಮೂಲಕ ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ ಭಾರತದ ಸೇನೆಗೆ ಮಾತ್ರವಲ್ಲದೇ, 100 ದೇಶಗಳಿಗೂ ಸಂಸ್ಥೆ ಗುಂಡು ನಿರೋಧಕ ಜಾಕೆಟ್ಗಳನ್ನು ತಯಾರಿಸಿ ಕೊಡುತ್ತಿದೆ. ಎಕೆ-47 ಗನ್ನಿಂದ 700 ಮೀಟರ್ ಅಂತರದಿಂದ ಗುಂಡು ಹಾರಿಸಿದರೂ ಜೀವರಕ್ಷಣೆ ಮಾಡುವ ಸಾಮರ್ಥ್ಯವುಳ್ಳ ಗುಂಡು ನಿರೋಧಕ ಶಕ್ತಿ ಈ ಜಾಕೆಟ್ಗಳಿಗೆ ಇದ್ದು, 360 ಡಿಗ್ರಿಯಲ್ಲೂ ರಕ್ಷಣೆ ನೀಡುವ ಸಾಮಾರ್ಥ್ಯ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
’ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಬಿಐಎಸ್ ಮನದಂಡ ಪ್ರಕಾರ ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಖರೀದಿ ಮಡಲಾಗುತ್ತಿದೆ. ಮಾತ್ರವಲ್ಲದೇ ಇತರ 100 ಇದನ್ನು ಮಾರಾಟ ಮಾಡಲಾಗುತ್ತಿದೆ' ಎಂದು ಬಿಐಎಸ್ ಉಪನಿರ್ದೇಶಕ ರಾಜೇಶ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ತನ್ನದೇ ಆದ ರಾಷ್ಟ್ರೀಯ ಮನದಂಡವನ್ನು ಹೊಂದಿರುವ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಹೊಂದಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದ್ದು, ಇನ್ನು ಅಮೆರಿಕ, ಬ್ರಿಟನ್, ಜರ್ಮನಿ ಬಳಿಕ ಅಂತರಾಷ್ಟ್ರೀಯ ಗುಣಮಟ್ಟದ ಬುಲೆಟ್ ಪ್ರೂಫ್ ಜಾಕೆಟ್ ರಫ್ತು ಮಾಡುವ ನಾಲ್ಕನೇ ದೇಶ ಭಾರತವಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸ್ಟ್ಯಾಂಡರ್ಡ್ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು 2018 ರಲ್ಲಿ ಪರಿಚಯಿಸಲಾಯಿತು. ಭಾರತದಲ್ಲಿ ಎರಡು ಸರ್ಕಾರಿ ಸಂಸ್ಥೆಗಳಾದ ಮೆದಾನಿ ಮತ್ತು ಆರ್ಡಿನನ್ಸ್ ಫ್ಯಾಕ್ಟರಿಗಳಲ್ಲಿ ಬಿಐಎಸ್ ಬುಲೆಟ್ ಪ್ರೂಫ್ ಜಾಕೆಟ್ಗಳು ತಯಾರಾಗುತ್ತಿವೆ. ಅಲ್ಲದೆ, ಖಾಸಗಿ ಸಂಸ್ಥೆಗಳಾದ ಎಸ್ಎನ್ಪಿಪಿ, ಸ್ಟಾರ್ವೈರ್, ಮತ್ತು ಎಂಕೆಯು ಕೂಡ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ತಯಾರಿಸುತ್ತಿದೆ. ಈಗಾಗಲೇ ಭಾರತದ ಸೇನೆಗಳಿಗೆ 1.86 ಲಕ್ಷ ಜಾಕೆಟ್ಗಳನ್ನು ಪೂರೈಸಿದೆ.