ನವದೆಹಲಿ, ಸೆ 15 (Daijiworld News/RD): ದೇಶದ ಆರ್ಥಿಕ ಸುಧಾರಣೆಯ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಕನಿಷ್ಠ ಜ್ಞಾನವಿಲ್ಲ, ಶನಿವಾರ ಅವರು ಘೋಷಣೆ ಮಾಡಿರುವ ಕ್ರಮಗಳು ಕೇವಲ ಅಂದಗೊಳಿಸುವ ಪ್ರಯತ್ನವಷ್ಟೆ ಎಂದು ಕಾಂಗ್ರೇಸ್ ಟೀಕಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ, ನಿರ್ಮಲಾ ಸೀತಾರಾಮನ್ ಗೆ ಆರ್ಥಿಕತೆ ಬಗ್ಗೆ ಕನಿಷ್ಠ ಜ್ಞಾನವಿಲ್ಲ ಎಂದೆನಿಸುತ್ತದೆ. ನಿರ್ಮಲಾಗೆ ಆರ್ಥಿಕ ಸಂಕಷ್ಟವನ್ನು ಹೇಗೆ ನಿಭಾಯಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದ್ದಾರೆ. ನಿರ್ಮಲಾ ಕೈಗೊಂಡಿರುವ ಆರ್ಥಿಕ ಉತ್ತೇಜನ ಕ್ರಮಗಳಿಂದ ಇಂದು ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಇದರಿಂದ ಇನ್ನು ಸಮಸ್ಯೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಭಾರತದ ಆಥಿಕತೆಯು ಕುಸಿತ ಕಂಡಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ, ಈ ವೇಳೆ ಇದನ್ನು ಸುಧಾರಿಸಲು ಕುತ್ತಮ ಕ್ರಮ ಕೈಗೊಳಬಹುವುದು ಎಂದು ನಿರೀಕ್ಷಿಸಿದ್ದೆವು, ಆದರೆ, ನಿರ್ಮಲಾ ಕೈಗೊಂಡಿರುವ ಕ್ರಮಗಳು ಕೇವಲ ಕಾಸ್ಮೆಟಿಕ್, ಅಂದಗೊಳಿಸುವ ಪ್ರಯತ್ನವಾಗಿದ್ದು, ಈ ಮೂಲಕ ಕೇಂದ್ರ ಸರ್ಕಾರ ದರ್ಪ ತೋರಿಸುತ್ತಿದೆ ಎಂದು ಅನಂದ್ ಶರ್ಮಾ ಟೀಕಿಸಿದ್ದಾರೆ.