ಬೆಂಗಳೂರು, ಸೆ 15 (Daijiworld News/RD): ಮೊಬೈಲ್ ಮಿತಿಮೀರಿ ಬಳಸುತ್ತಿರುವುದನ್ನು ಗಮನಿಸಿದ ತಾಯಿ ಮೊಬೈಲ್ ಕಿತ್ತುಕೊಂಡ ವಾಪಾಸ್ಸು ನೀಡದೇ ಇದ್ದ ಕಾರಣಕ್ಕೆ ಹತ್ತನೇ ತರಗತಿ ಬಾಲಕಿ ನೇಣಿಗೆ ಶರಣಾದ ಘಟನೆ ಬೆಂಗಳೂರು ಹನುಮಂತ ನಗರದಲ್ಲಿ ನಡೆದಿದೆ.
ಪ್ರಿಯಾಂಕಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹನುಮಂತ ನಗರದ 9ನೇ ರಸ್ತೆಯಲ್ಲಿ ವಾಸವಾಗಿರುವ ಪ್ರಿಯಾಂಕಾ ಸಂಜೆ ಮೊಬೈಲ್ ತೆಗೆದುಕೊಂಡು ಸ್ನೇಹಿತೆ ಮನೆಗೆ ಹೋಗಲು ತಯಾರಾಗಿದ್ದಳು. ಈ ವೇಳೆ ಮೊಬೈಲ್ ತೆಗೆದುಕೊಂಡು ಹೋಗದಂತೆ ತಾಯಿ ಬುದ್ದಿ ಹೇಳಿ, ಮೊಬೈಲ್ ಕಿತ್ತಿಟ್ಟುಕೊಂಡಿದ್ದರು.
ಇದೇ ವಿಚಾರಕ್ಕೆ ತಾಯಿ, ಮಗಳು ಜಗಳ ಮಾಡಿಕೊಂಡಿದ್ದು, ಇಷ್ಟೆಲ್ಲಾ ಆದರೂ ತಾಯಿ ಮೊಬೈಲ್ ಕೊಡದೇ ಇರುವುದನ್ನು ಗಮನಿಸಿ ಪ್ರಿಯಾಂಕಾ, ಸ್ನೇಹಿತೆ ಮನೆಗೆ ಹೋಗದೆ ರೂಂ ಸೇರಿಕೊಂಡಿದ್ದಾಳೆ. ಆಗ ತಾಯಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಎಂದು ಹೇಳಿ ಹೋಗಿ ಬರುವಷ್ಟರಲ್ಲಿ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.