ಮುಂಬೈ, ಸೆ 15 (Daijiworld News/RD): ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೋಸ್ಕರ ಪಾಕಿಸ್ತಾನದ ಮೇಲೆ ಇಲ್ಲದ ಸಲ್ಲದ ಆರೋಪ ಹೊರಿಸಿ, ಪಾಕ್ ವಿರುದ್ದ ಸುಳ್ಳು ಪ್ರಚಾರ ಮಾಡುತ್ತಿದೆ. ಈಗಾಗಲೇ ನಾನು ಪಾಕ್ ನಿಂದ ಒಳ್ಳೆಯ ಆತಿಥ್ಯವನ್ನು ಸ್ವೀಕರಿಸಿದ್ದೇನೆ ಎಂದು ನ್ಯಾಶನಿಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಪಾಕ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಮುಂಬಯಿಯ ಎನ್ ಸಿಪಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಶರದ್ ಪವಾರ್ ಮಾತನಾಡಿದ ಅವರು, "ನಾನು ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿನ ಪ್ರಜೆಗಳಿಂದ ಒಳ್ಳೆಯ ರೀತಿಯ ಆತಿಥ್ಯವನ್ನು ಪಡೆದಿದ್ದೇನೆ. ಆದರೆ ಕೇಂದ್ರ ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ಪಾಕ್ ಬಗ್ಗೆ ಇಲ್ಲದ ಸಲ್ಲದ ಆರೋಪ ಪಾಕ್ ನ ಬಗ್ಗೆ ಸುಳ್ಳನ್ನು ಪ್ರಚಾರ ಮಾಡುತ್ತಿದೆ ಎಂದಿದ್ದಾರೆ.
ಈ ವೇಳೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಈ ನಿರ್ಧಾರವನ್ನು ಟೀಕಿಸಿದ ಪವಾರ್, ಇದರಿಂದ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲಿವೆ ಎಂದರು.