ಬೆಂಗಳೂರು, ಸೆ.23 (DaijiworldNews/AK): ಹಣಕಾಸು ಇಲಾಖೆ ನಿಭಾಯಿಸಲು ಇವರಿಂದ ಆಗುತ್ತಿಲ್ಲ. ಆದ್ದರಿಂದ ನೀವು ಮುಖ್ಯಮಂತ್ರಿ ಆಗಿರೋಕೆ ಲಾಯಕ್ಕಿಲ್ಲ. ತಕ್ಷಣವೇ ರಾಜೀನಾಮೆ ಕೊಡಿ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬೆಳಿಗ್ಗೆ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಹಣಕಾಸು ಇಲಾಖೆ ನಿಯಂತ್ರಿಸಲು ನಿಮಗೆ ಶಕ್ತಿ ಇಲ್ಲ ಎಂದು ಆಕ್ಷೇಪಿಸಿದರು.
ಡಿಕೆ ದಿವಾಳಿ! ಇದು ಪಾಪರ್ ಸರ್ಕಾರ ಇವತ್ತು ಕರ್ನಾಟಕದಲ್ಲಿ ಸರ್ಕಾರ ನಡೆಸುವಂತ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ ಇವತ್ತು. ಹಣ ಇಲ್ಲದೆ ಕಾಂಗ್ರೆಸ್ ಪಾರ್ಟಿಯ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಸರ್ಕಾರ ಹಣದ ಕೊರತೆ ದಿವಾಳಿ ಆಗಿರೋದಕ್ಕೆ ಒಂದು ಹಣಕಾಸು ಇಲಾಖೆಯವರು ಒಂದು ಶ್ವೇತಪತ್ರನೇ ಬಿಡುಗಡೆ ಮಾಡಿಬಿಟ್ಟಿದ್ದಾರೆ ಎಂದು ಗಮನ ಸೆಳೆದರು.
ಡಿ.ಕೆ. ಶಿವಕುಮಾರಣ್ಣ ನೀನು ಎಲ್ಲಿ ಮೊನ್ನೆ ಮಂಗಳೂರಿಗೆ ಹೋಗಿದ್ದೆ, 32 ಸಾವಿರ ಕೋಟಿ, ಮಂಗಳೂರಲ್ಲಿ ಮೀನು ತಿಂದ್ಮೇಲೆ 32 ಸಾವಿರ ಕೋಟಿ ಘೋಷಿಸಿದ್ದಾರೆ. ಗುಲ್ಬರ್ಗಾಗೆ ಹೋಗಿದ್ರಿ ಸಿದ್ದರಾಮಯ್ಯನವರು ಅಲ್ಲಿ 40 ಸಾವಿರ ಕೋಟಿ, ಚಾಮರಾಜನಗರಕ್ಕೆ ಹೋಗಿದ್ರಿ 20 ಸಾವಿರ ಕೋಟಿ, ಅಲ್ಲಿ ಇಲ್ಲಿ ಕ್ಯಾಬಿನೆಟ್ ಮಾಡಿದ್ವಿ 25 ಸಾವಿರ ಕೋಟಿ, ಬಾಗಲಕೋಟೆಯಲ್ಲಿ ಕ್ಯಾಬಿನೆಟ್ ಅಲ್ಲಿ ಒಂದು 50 ಸಾವಿರ ಕೋಟಿ ಪ್ರಕಟಿಸಿದ್ದೀರಿ ಎಂದು ಟೀಕಿಸಿದರು.
ಕಾಂಗ್ರೆಸ್ ಪಾರ್ಟಿ ಖಾಲಿ ಡಬ್ಬ ಅನ್ನೋದು ಇವತ್ತು ಸ್ಪಷ್ಟ ಆಗ್ತಾ ಇದೆ. ಜನರ ಪಾಲಿಗೆ ಚೊಂಬು ಬರಕ್ಕೆ ದುಡ್ಡು ಕೊಡೋಕಾಗಿಲ್ಲ ನಾಲ್ಕು ತಿಂಗಳು ಆಯ್ತು ಬರ ಐದು ತಿಂಗಳಿಂದ ಪೆನ್ಷನ್ ಹಣ ಕೊಟ್ಟಿಲ್ಲ. ಐದು ತಿಂಗಳು ಆಯ್ತು; ಬಡವರು ಸಾಯ್ತಾ ಇದ್ದಾರೆ. ಶಿಕ್ಷಕರಿಗೆ ಸಂಬಳ ಇಲ್ಲ, ರೈತರಿಗೆ ಕರೆಂಟ್ ಇಲ್ಲ. ಹಾಲು ಉತ್ಪಾದಕರು ಯಾರಿದ್ದಾರೋ ಅವರಿಗೆ 12 ತಿಂಗಳಿಂದ ಅವರಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ, ಸಾವಿರಾರು ರೂಪಾಯಿ ಕೊಡಬೇಕು ಎಂದು ಆಕ್ಷೇಪಿಸಿದರು.
ಕ್ಯಾಬಿನೆಟ್ ಮಾಡಿದ್ದೆ ಮಾಡಿದ್ದು; ಏನು ಹೇಳಿದ್ದು ಹೇಳಿದ್ದೆ, ಘೋಷಣೆ. ಘೋಷಣೆಗಳ ಸರ್ಕಾರ, ಬೋಗಸ್ ಸರ್ಕಾರ. ಇವತ್ತು ಹಣಕಾಸು ಇಲಾಖೆಯವರು ಹೇಳಿದ್ದಾರೆ, ನೀವೊಬ್ಬರು ನಾಲಾಯಕ್ ಅನ್ನೋ ರೀತಿ ಅವರು ಹೇಳಿಲ್ಲ, ಆದರೆ ಅದರ ಅರ್ಥ ನೀವು ಫೈನಾನ್ಸ್ ಇಲಾಖೆಯನ್ನು ಅರ್ಥ ಮಾಡಿಕೊಂಡೆ, ನಿಮಗೆ ಮನಸ್ಸಿಗೆ ಬಂದಂಗೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀರಾ. ನ್ಯಾಯವೇ? ಎಂದು ಕೇಳಿದರು.