ನವದೆಹಲಿ, ಸೆ 16 (Daijiworld News/RD): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್ ) ಎಂಬುದು ಒಂದು ಪದವಲ್ಲ, ಅದೊಂದು ಚಳವಳಿ. ನನ್ನ ಪ್ರಕಾರ ಆರೆಸ್ಸೆಸ್ ಇಲ್ಲದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ ಎಂದು ರಾಜಸ್ತಾನ ಬಿಜೆಪಿ ಮುಖಂಡ ಘಟಕದ ನೂತನ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರಾಗಿ ಸತೀಶ್ ಪೂನಿಯಾ ನೇಮಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ವೇಳೆ ಮಾತನಾಡಿದ ಅವರು, ಹಿಂದೂಸ್ತಾನ ಇರಲು ಆರ್ ಎಸ್ ಎಸ್ ಕಾರಣ ಎಂದರು.
ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬುದು ಶಕ್ತಿಶಾಲಿ ಚಳವಳಿಯಾಗಿದ್ದು, ಇಡೀ ವಿಶ್ವವನ್ನೆ ಬದಲಿಸುವ ಶಕ್ತಿ ಇದ್ದಕ್ಕಿದೆ ಎಂದರು. ಮೊಘಲರು ಮತ್ತು ಬ್ರಿಟಿಷರ ಜತೆ ದೇಶದ ಕೆಲವು ಪಕ್ಷಗಳು ಕೈಜೋಡಿಸಿ ದೇಶ ವಿಭಜನೆಗೆ ಕಾರಣರಾದರು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಟೀಕಿಸಿದರು.