ಹೈದರಾಬಾದ್, ಸೆ 16 (Daijiworld News/RD): ಆಂಧ್ರ ಪ್ರದೇಶದ ಮಾಜಿ ವಿಧಾನಸಭೆ ಸ್ಪೀಕರ್ ಕೊಡೆಲ ಶಿವಪ್ರಸಾದ್ ರಾವ್ ಅವರು ತಮ್ಮ ಹೈದರಾಬಾದ್ನ ಬಂಜಾರಾ ಹಿಲ್ಸ್ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
72 ವರ್ಷದ ಶಿವಪ್ರಸಾದ್, ಬೆಳಗ್ಗೆ ತಿಂಡಿ ತಿಂದು ರೂಮ್ಗೆ ಹೋಗಿದ್ದರು. ನಂತರ ಅವರು ರೂಮ್ ಬಿಟ್ಟು ಬಾರದೆ ಇರುವುದನ್ನು ಗಮನಿಸಿದ ಅವರ ಮನೆಯವರು ರೂಮ್ ಒಳಗೆ ಹೋಗಿ ನೋಡಿದಾಗ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಹೈದರಾಬಾದ್ನ ಬಸವತಾರಕಂ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕೊಡೆಲಾ ಶಿವ ಪ್ರಸಾದ್ ನಿಧನಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಆಘಾತ ವ್ಯಕ್ತ ಪಡಿಸಿದ್ದಾರೆ. ಕೊಡೆಲಾ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ಆರು ಬಾರಿ ಶಾಸಕರಾಗಿದ್ದ ಕೊಡೆಲಾ, ಆಂಧ್ರ ಪ್ರದೇಶ ವಿಭಜನೆಯಾದ ನಂತರ ಮೊದಲ ಬಾರಿಗೆ ಸ್ಪೀಕರ್ ಆಗಿ ನೇಮಕವಾಗಿದ್ದರು, 1985 ರಲ್ಲಿ ಎನ್ ಟಿ ಆರ್, ಸಂಪುಟದಲ್ಲಿ ಗೃಹ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಸ್ಪೀಕರ್ ಆಗಿ ತಮ್ಮ ಅವದಿ ಮುಗಿದ ನಂತರ ಅವರು ವಿಧಾನಸಭೆಯಲ್ಲಿರುವ ಕಂಪ್ಯೂಟರ್ ಮತ್ತು ಎಸಿ ಹಾಗೂ ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದಿದ್ದಾರೆ ಎಂಬ ಆರೋಪ ಶಿವಪ್ರಸಾದ್ ರಾವ್ ವಿರುದ್ಧ ಹೇರಲಾಗಿತ್ತು.