ಅಹಮದಾಬಾದ್, ಸೆ.17(Daijiworld News/SS): ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಗುಜರಾತ್ ರಾಜ್ಯದ ಕೇವಡಿಯಾ ಜಿಲ್ಲೆಯಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ಆರತಿ ಬೆಳಗಿದ್ದಾರೆ.
ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿಯವರು ಬಣ್ಣ, ಬಣ್ಣದ ಚಿಟ್ಟೆಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದ್ದು, ಬಳಿಕ ಸರ್ದಾರ್ ಸರೋವರ ಅಣೆಕಟ್ಟನ್ನು ವೀಕ್ಷಣೆ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಪ್ರಥಮ ಪೂರ್ಣವೈಭವ ವೀಕ್ಷಿಸಿದ್ದಾರೆ.
1961, ಏಪ್ರಿಲ್ 5ರಂದು ಸರ್ದಾರ್ ಸರೋವರ ಅಣೆಕಟ್ಟೆ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅಡಿಗಲ್ಲುನೆಟ್ಟಿದ್ದರು. ಅದಾಗಿ ಹಲವು ಅಡೆತಡೆಗಳಿಂದ ವಿಳಂಬಗೊಂಡಿದ್ದ ಕಾಮಗಾರಿ 56 ವರ್ಷಗಳ ಬಳಿಕ, 2017ರಲ್ಲಿಪೂರ್ಣಗೊಂಡಿತ್ತು. 2018ರಲ್ಲಿಮಳೆ ಕೊರತೆ ಕಾರಣ ಅಣೆಕಟ್ಟೆ ತುಂಬಿರಲಿಲ್ಲ. ಈ ವರ್ಷ ಸಮೃದ್ಧ ಮಳೆಯಿಂದ ಮೊದಲ ಬಾರಿ ಭರ್ತಿಯಾಗಿದೆ.