ನವದೆಹಲಿ, ಸೆ 17 (DaijiworldNews/SM): ಕೋರ್ಟ್ ಮೂಲಕ ಬಿಡುಗಡೆಯ ಆಸೆಯನ್ನು ಜೀವಂತವಾಗಿರಿಸಿದ್ದ ಡಿಕೆಶಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಡಿಕೆಶಿಯವರನ್ನಿ ಇಡಿ ಈಗಾಗಲೇ ತಮ್ಮ ವಶಕ್ಕೆ ಪಡೆದುಕೊಂಡಿತ್ತು. ವಿಚಾರಣೆ ನಿರಂತರವಾಗಿ ನಡೆದರೂ ಪೂರ್ಣಗೊಳ್ಳದ ಹಿನ್ನೆಲೆ ಡಿಕೆಶಿಯವರನ್ನು ತಮ್ಮ ವಶಕ್ಕೆ ಕೇಳಿತ್ತು. ಆದರೆ, ಇದೀಗ ಡಿಕೆಶಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಅಲ್ಲದೆ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.