ಚೆನ್ನೈ, ಸೆ.18(Daijiworld News/SS): ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜೊತೆ ಮದುವೆ ಮಾಡಿಸಿಕೊಡಿ ಎಂದು 70 ವರ್ಷದ ವ್ಯಕ್ತಿಯೊಬ್ಬ ಜಿಲ್ಲಾ ಕಲೆಕ್ಟರ್'ಗೆ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮಲೈಸ್ವಾಮಿ ಎಂಬ ವೃದ್ಧ, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ತಾನು ಸಿಂಧು ಅವರನ್ನು ಮದುವೆಯಾಗಲು ಬಯಸಿರುವುದಾಗಿ, ಮದುವೆಗೆ ಅಗತ್ಯವಾದ ವ್ಯವಸ್ಥೆ ಮಾಡದಿದ್ದರೆ ಆಕೆಯನ್ನು ಅಪಹರಿಸಿ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾನೆ.
ವಿಚಿತ್ರ ಏನೆಂದರೆ 70 ವರ್ಷದ ವ್ಯಕ್ತಿ ಅರ್ಜಿಯಲ್ಲಿ ತನ್ನ ವಯಸ್ಸು ಕೇವಲ 16 ವರ್ಷ ಎಂದು ಹೇಳಿದ್ದಾರೆ. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನು ಜೀವನಸಂಗಾತಿಯಾಗಿ ಪಡೆಯಲು ಇಚ್ಛಿಸುತ್ತೇನೆ. ಒಂದೊಮ್ಮೆ ಅವರು ಮದುವೆಗೆ ಒಪ್ಪದಿದ್ದರೆ ಅಪಹರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ.