ಗುಜರಾತ್, ಸೆ 18 (Daijiworld News/MSP): ತಲೆಗೆ ರುಮಾಲು ಸುತ್ತಿಕೊಳ್ಳುವ ಸಿಖ್ಖರನ್ನು ಹೊರತುಪಡಿಸಿ ದೇಶದಲ್ಲಿರುವ ಎಲ್ಲಾ ಬೈಕ್ ಸವಾರರಿಗೂ ಹೆಲೈಟ್ ಧರಿಸುವುದು ಕಡ್ಡಾಯ.ಆದರೆ ಇಲ್ಲೊಬ್ಬ ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೆ ಸಂಚರಿಸುತ್ತಿದ್ದರೂ ಆತನಿಗೆ ದಂಡ ವಿಧಿಸಲಾಗದೆ ಸಂಚಾರಿ ಪೊಲೀಸರು ಸುಮ್ಮನೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಜರಾತ್ ನ ಗಾಂಧಿನಗರದಲ್ಲಿ ಪೊಲೀಸರು ಅಹಮದಾಬಾದ್ ಮೂಲದ ಜಾಕಿರ್ ಮೆಮೂನ್ ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡುತ್ತಿದ್ದರೂ ದಂಡ ವಿಧಿಸದೆ ಅಸಹಾಯಕರಾಗಿದ್ದಾರೆ. ಪೊಲೀಸರು ಹೆಲ್ಮೆಟ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸುವಂತಿಲ್ಲ. ಯಾಕೆಂದರೆ ಇಲ್ಲಿ ತನಕ ಆತನಿಗೆ ಸರಿ ಹೊಂದುವ ಹೆಲ್ಮೆಟ್ ಸಿಕ್ಕಿಲ್ಲ. ಹೌದು ಆತನ ಶಿರ ದೊಡ್ಡದಾಗಿದ್ದು ಅದಕ್ಕೆ ಹೊಂದಾಣಿಕೆಯಾಗುವ ಹೆಲ್ಮೆಟ್ ಸಿಗುತ್ತಿಲ್ಲ.
ಯಾವ ಹೆಲ್ಮೆಟ್ ಸಹ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದಂಡ ವಿಧಿಸದ ಜಾಕಿರ್ ನನ್ನು ಬಿಟ್ಟು ಕಳುಹಿಸಿದ್ದಾರೆ.