ಬೆಂಗಳೂರು, ಸೆ.18(Daijiworld News/SS): ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಟೀಕಿಸಿದರು.
ಕೇಂದ್ರ ಸರ್ಕಾರ ನಮಗೂ ರಾಜ್ಯದ ಪ್ರವಾಹಕ್ಕೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ. ಪ್ರಧಾನಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರವೂ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಬೆಂಗಳೂರಿಗೆ ಬಂದರೂ ಪ್ರಧಾನಿ ಒಂದು ಮಾತನಾಡಿಲ್ಲ. ರಾಜ್ಯ ಬರಗಾಲದಲ್ಲಿ ಬಿದ್ದಿದೆ ಎಂದು ಹೇಳಿದರು.
ಭೀಕರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. 22 ಜಿಲ್ಲೆ 103 ತಾಲೂಕಿನಲ್ಲಿ ಹಿಂದೆಂದಿಗಿಂತಲೂ ಪ್ರವಾಹ ಹೆಚ್ಚಾಗಿದೆ. ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಮನೆಗೆ ನೀರು ನುಗ್ಗಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಿಲ್ಲ. ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ. 10 ಸಾವಿರ ಪಾತ್ರೆ, ಬಟ್ಟೆ, ಮಕ್ಕಳ ಪುಸ್ತಕ ಹಾಸಿಗೆ ಗಳನ್ನು ತೆಗೆದುಕೊಳ್ಳಲು ಕೊಟ್ಟಿದ್ದಾರೆ. ಒಂದು ಮನೆಯಲ್ಲಿ ನಾಲ್ಕೈದು ಕುಟುಂಬ ಇರುತ್ತವೆ ಎಂದು ಹೇಳಿದರು.
ಈಶ್ವರಪ್ಪ ಸಂಸ್ಕೃತಿ ಇಲ್ಲದ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್. ಕೆಟ್ಟ ಭಾಷೆ ಮಾತಾನಾಡಲು ಎಲ್ಲರಿಗೂ ಬರುತ್ತದೆ. ಜನ ಜನಪ್ರತಿನಿಧಿಗಳ ಬಗ್ಗೆ ಜನರು ನೋಡುತ್ತಾರೆ. ಕೆಟ್ಟದಾಗಿ ಮಾತನಾಡುವುದು ಅವರ ಕಸುಬಾಗಿದೆ. ಬಿಜೆಪಿಗೆ ಓಟು ಹಾಕುವವರು ಮಾತ್ರ ದೇಶಭಕ್ತ ಮುಸ್ಲೀಮರು ಎಂದು ಹೇಳುತ್ತಾರೆ. ಕಾಂಗ್ರೆಸ್ ಗೆ ಓಟ್ ಹಾಕೋರು ಪಾಕಿಸ್ತಾನದ ಪರ ಇದ್ದಾರೆ ಅಂತ ಹೇಳ್ತಾರೆ. ಅವರ ಮಾತಿಗೆ ಅರ್ಥ ಇದೇಯಾ..? ಎಂದು ಪ್ರಶ್ನಿಸಿದರು.