ಕಲಬುರಗಿ, ಸೆ 19 (Daijiworld News/RD): ಯುವತಿಯೊಬ್ಬಳ ಜೊತೆ ಅಶ್ಲೀಲವಾಗಿ ಚಾಟಿಂಗ್ ಮಾಡಿದ್ದ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿ ಹೊಳೆಯ ಕಣ್ವಮಠದ ಪೀಠಾಧಿಪತಿ ವಿದ್ಯಾವಾರಿದಿ ತೀರ್ಥ ಸ್ವಾಮೀಜಿ ಇದೀಗ ಪೀಠ ತ್ಯಾಗಕ್ಕೆ ನಿರ್ಧರಿಸಿದ್ದಾರೆ.
ಕೋಟ್ಯಾಂತರ ರುಪಾಯಿಗಳ ಮಠದ ಆಸ್ತಿಯ ಮೇಲೆ ಕೆಲವರು ಕಣ್ಣಿದ್ದು, ಈ ಹಿನ್ನಲೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಈ ರೀತಿಯ ಸುಳ್ಳು ಆರೋಪವನ್ನು ಮಾಡುವ ಮೂಲಕ ವ್ಯಕ್ತಿತ್ವವನ್ನು ಅಲ್ಲಗಳೆಯುತ್ತಿದ್ದಾರೆ. ಈ ರೀತಿಯ ಅಪಪ್ರಚಾರದ ಮೂಲಕ ಮಠದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಕೀಳುಮಟ್ಟದ ಆರೋಪದಿಂದ ಮನನೊಂದು ಪೀಠ ತ್ಯಾಗಕ್ಕೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಐತಿಹಾಸಿಕ ಹಾಗೂ ಧಾರ್ಮಿಕ ಪೀಠಗಳಲ್ಲಿ ಒಂದಾದ ಹುಣಸಿಹೊಳಿ ಕಣ್ವಮಠದ 13ನೇ ಪೀಠಾಧಿಪತಿಗಳಾದ ವಿದ್ಯಾವಾರಿಥಿ ತೀರ್ಥರ ವಿರುದ್ಧ ಅಶ್ಲೀಲ ಸಂದೇಶ ಹಾಗೂ ಸಂಭಾಷಣೆ ನಡೆಸಿರುವ ಆರೋಪಗಳನ್ನು ಎದುರಿಸುತ್ತಿದ್ದು, ಶ್ರೀಗಳ ವಾಟ್ಸ್'ಆ್ಯಪ್ ಚಾಟಿಂಗ್ ಹಾಗೂ ಆಡಿಯೋ ಕ್ಲಿಪ್ಪಿಂಗ್ ಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.