ಮುಂಬಯಿ , ಸೆ 19 (Daijiworld News/MSP): ಮುಂದೆ ಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನ ಸ್ಥಾನದ ಸೂತ್ರ ಅನುಸರಿಸದಿದ್ದರೆ ಬಿಜೆಪಿ ಜೊತೆಗಿನ ಮೈತ್ರಿ ಮುರಿಯಬೇಕಾಗುತ್ತದೆ ಎಂದು ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಂಜಯ್ ರೌತ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅಮಿತ್ ಶಾ ಅವರು ಮಾತುಕತೆಯ ಸಮ್ಮುಖದಲ್ಲಿ ನಿರ್ಧರಿಸಿದ 50:50 ಸೂತ್ರಗಳನ್ನು ಬಿಜೆಪಿ ಗೌರವಿಸಬೇಕಾಗಿದೆ. ನಾನು ಬಿಜೆಪಿಯೊಂದಿಗೆ ಮೈತ್ರಿ ಮುರಿಯುವ ಬಗ್ಗೆ ಯಾವ ಆದರೆ ಯಾವುದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಆದರೆ ದಿನಕರ್ ರೌಟೆ ಹೇಳಿರುವುದರಲ್ಲಿ ತಪ್ಪಿಲ್ಲ" ಎಂದುತಿಳಿಸಿದರು.
ಬುಧವಾರ, ಮಹಾರಾಷ್ಟ್ರ ಸರ್ಕಾರದ ಸಚಿವರಾಗಿರುವ ಶಿವಸೇನೆ ನಾಯಕ ರೌಟೆ, ಬಿಜೆಪಿಯಿಂದ ಸಮಾನ ಸಂಖ್ಯೆಯ ಸ್ಥಾನಗಳನ್ನು ನೀಡದಿದ್ದರೆ ಶಿವಸೇನೆ ಮತ್ತು ಬಿಜೆಪಿ ನಡುವಿನ ಚುನಾವಣಾ ಪೂರ್ವ ಮೈತ್ರಿ ಮುರಿಯಬಹುದು ಎಂದು ಹೇಳಿಕೊಂಡಿದ್ದರು.
ಚುನಾವಣಾ ಪೂರ್ವ ಮೈತ್ರಿಗಾಗಿ '50 -50 ಸೂತ್ರ' ಅನುಸರಿಸುವಂತೆ ಶಿವಸೇನೆ ಒತ್ತಾಯಿಸುತ್ತಿದೆ. ಆದರೆ ಬಿಜೆಪಿಗೆ ಶಿವಸೇನೆಗೆ 124 ಕ್ಕಿಂತ ಹೆಚ್ಚು ಸ್ಥಾನ ಬಿಡಲು ಇಷ್ಟವಿಲ್ಲ ಎಂದು ತಿಳಿದುಬಂದಿದೆ. 2014 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಗಿ ಎರಡೂ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಆ ಬಳಿಕ ಸರ್ಕಾರ ರಚಿಸಲು ಎರಡೂ ಪಕ್ಷಗಳು ಕೈಜೋಡಿಸಿದವು.