ನವದೆಹಲಿ, ಸೆ 19 (Daijiworld News/RD): ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿ ಆರ್ ಎಫ್) ಹೊಸ ಬೆಟಾಲಿಯನ್ ಗಳಲ್ಲಿ ಮಹಿಳೆಯರನ್ನು ನೇಮಿಸಲಾಗುವುದು ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಸಿಬ್ಬಂದಿಗೆ ಬೇಕಾದ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಇಲಾಖೆ ಒಳಗೊಂಡಿದ್ದು, ಮಹಿಳಾ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಈಗಾಗಲೇ ಆರಂಭಿಸಿದ್ದೇವೆ ಎಂದು ಎನ್ ಡಿ ಆರ್ ಎಫ್ ಪ್ರಧಾನ ನಿದೇರ್ಶಕ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
ಹೊಸ ನಾಲ್ಕು ಬೆಟಾಲಿಯನ್ ಗಳಲ್ಲಿ ನಿರ್ಧಿಷ್ಟ ಸಂಖ್ಯೆಯ ಮಹಿಳಾ ಸಿಬ್ಬಂದಿಯನ್ನು ನೇಮಿಸುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ಇದು ಮುಂದಿನ ವರ್ಷಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಮಹಿಳಾ ಸಿಬ್ಬಂದಿಯ ನೇಮಿಸುವ ಬಗ್ಗೆ ಕೇಂದ್ರ ಸರ್ಕಾರ 2018 ರಲ್ಲಿ ಪ್ರಸ್ತಾವ ಸಿದ್ದಪಡಿಸಿತ್ತು ಎಂದರು.
ಇವರು ಇತ್ತೀಚೆಗಷ್ಟೆ ಎನ್ ಡಿ ಆರ್ ಏಫ್ ನ ಎರಡನೇ ಹೊಸ ಬೆಟಾಲಿಯನ್ ಪ್ರಧಾನ ಕ್ಯಾಂಪ್ ಅನ್ನು ಪಶ್ಚಿಮ ಬಂಗಾಳದ ಹರಿನ್ ಘಾಟದಲ್ಲಿ ಉದ್ಘಾಟಿಸಿದ್ದಾರೆ.