ಉತ್ತರಪ್ರದೇಶ,ಸೆ 20 (Daijiworld News/MSP): 23 ವರ್ಷದ ಯುವತಿಯ ವಿರುದ್ಧ ಸತತ ಒಂದು ವರ್ಷಗಳ ಕಾಲ ಅತ್ಯಾಚಾರ ನಡೆಸಿರುವ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದರ ನಾವು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಐದು ದಿನಗಳ ಹಿಂದೆಯಷ್ಟೇ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿನ್ಮಯಾನಂದ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಈ ಹಿನ್ನೆಲೆ ಇಂದು 8:೩೦ ರ ಹೊತ್ತಿಗೆ ಅರೆಸ್ಟ್ ಮಾಡಲಾಗಿದೆ ಕಳೆದ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸಂತ್ರಸ್ರೆಯನ್ನು ಕೋರ್ಟ್ ಗೆ ಕರೆತಂದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೆ ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿ ಆಕೆಯ ಸ್ನೇಹಿತೆಯಿಂದ ದೊರೆತ ಪೆನ್ಡ್ರೈವ್ ಒಂದನ್ನ ಎಸ್ಐಟಿ ತಂಡಕ್ಕೆ ನೀಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿತ್ತು.
" ಕಳೆದ ವರ್ಷ ಕಾಲೇಜಿನಲ್ಲಿ ಅಡ್ಮಿಷನ್ ಪಡೆಯಲು ಅಂತ ಚಿನ್ಮಯಾನಂದರನ್ನ ಭೇಟಿಯಾಗಿದ್ದೆ. ನನಗೆ ಅಡ್ಮಿಷನ್ ನೀಡಿದ ಚಿನ್ಮಯಾನಂದ ಗ್ರಂಥಾಲಯದಲ್ಲಿ ಕೆಲಸ ನೀಡಿ, ಹಾಸ್ಟೆಲ್ನಲ್ಲಿ ಇರುವಂತೆ ಸೂಚಿಸಿದ್ದರು. ನಾನು ಹಾಸ್ಟೆಲ್ಗೆ ಶಿಫ್ಟ್ ಆದ ಬಳಿಕ ನಾನು ಸ್ನಾನ ಮಾಡುತ್ತಿರುವ ವಿಡಿಯೋವೊಂದನ್ನ ತೋರಿಸಿ, ಬೆದರಿಸಿ ನನ್ನ ಮೇಲೆ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದಳು.