ಬೆಂಗಳೂರು, ಸೆ.20(Daijiworld News/SS): ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಅಧಿಕಾರ ಯಾರಿಗೂ ಶಾಶ್ವತವಲ್ಲ, ರಾಜಕಾರಣ ನಿಂತ ನೀರಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಎಚ್.ಡಿ. ದೇವೇಗೌಡ, ನಾನು ಮಾತನಾಡುವುದು ಬಹಳ ಇದೆ. ಕಾಲ ಎಲ್ಲರಿಗೂ ಬಂದೇ ಬರುತ್ತೆ. ಕಾಲ ಬಂದಾಗ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿರುವುದು ಹೌದು. ಕುಮಾರಸ್ವಾಮಿ ಟ್ವಿಟ್ ಮಾಡಿರುವುದು ಸರಿಯಾಗಿಯೇ ಇದೆ. ರಾಜಕಾರಣ ನಾಳೆಗೆ ನಿಲ್ಲಲ್ಲ. ನನ್ನ ರಾಜಕಾರಣವೂ ನಿಲ್ಲಲ್ಲ, ಯಡಿಯೂರಪ್ಪ ಅವರದೂ ನಿಲ್ಲಲ್ಲ, ಸಿದ್ದರಾಮಯ್ಯ ಅವರದೂ ನಿಲ್ಲಲ್ಲ ಎಂದು ಹೇಳಿದರು.