ಬೆಂಗಳೂರು, ಸೆ.21(Daijiworld News/SS): ಬಿಜೆಪಿಯವರು ಹಣದ ಮೂಲಕ ಜನರನ್ನು ಕೊಂಡುಕೊಳ್ಳಲು ಹೋಗಿ ವಂಚಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ದೂರಿದ್ದಾರೆ.
ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಕನಿಷ್ಠ IO ಸ್ಥಾನಗಳನ್ನಾದ್ರೂ ಗೆದ್ದೇ ಗೆಲ್ಲುತ್ತೇವೆ. ಬಿಜೆಪಿಯವರು ಹಣದ ಮೂಲಕ ಜನರನ್ನ ಕೊಂಡುಕೊಳ್ಳಲು ಹೋಗಿದ್ದಾರೆ. ನಾವು ಎಂದು ಬಿಜೆಪಿ ಅವರನ್ನ ಹಣ ಕೊಟ್ಟು ಕರೆಸಿಕೊಂಡು ಸರಕಾರ ಬೀಳಿಸಲ್ಲ ಎಂದು ಹೇಳಿದರು.
ಉಪಚುನಾವಣೆಯ ಮೂಲಕ ಸರಕಾರದ ಅಳಿವು ಉಳಿವು ಗೊತ್ತಾಗಲಿದೆ. ಈ ಸರಕಾರ ನಡೆಯಲು ಸಾಧ್ಯವಿಲ್ಲ. ಸರಕಾರದ ನಂಬರ್ ನೋಡಿದ್ರೆ ಗೊತ್ತಾಗತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ಎಚ್.ಡಿ ಕುಮಾರಸ್ವಾಮಿ, ಅಮೆರಿಕ ರಷ್ಯಾಕ್ಕೆ ಅಲ್ಲಿನ ಚುನಾವಣಾ ದೃಷ್ಟಿಯಿಂದ ಮೋದಿ ಹಣ ಖರ್ಚು ಮಾಡಿಕೊಂಡು ಹೋಗುತ್ತಾರೆ. ಆದ್ರೆ ಇಲ್ಲಿ ಜನ ಸಂಕಷ್ಟದಲ್ಲಿದ್ದರೂ ಒಂದು ಬಿಡುಗಾಸನ್ನು ಕೊಟ್ಟಿಲ್ಲ. ಅಮೆರಿಕಾದಲ್ಲಿ ಮುಂದಿನ ವರ್ಷ ಅಧ್ಯಕ್ಷರ ಚುನಾವಣೆ ಬರಲಿದೆ. ಹೀಗಾಗಿ ಅಮೇರಿಕಾ ದೇಶದಲ್ಲಿ ಹೆಚ್ಚಿನ ಭಾರತೀಯ ಮತದಾರರು ಇದ್ದಾರೆ. ಅವರಿಗೋಸ್ಕರ ದುಡ್ಡ್ ಖರ್ಚ್ ಮಾಡಿಕೊಂಡು ಹೋಗುತ್ತಾರೆ ಎಂದು ಟೀಕಿಸಿದರು.