ನವದೆಹಲಿ, ಸೆ 22 (Daijiworld News/RD): ಹರಿಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು 18 ರಾಜ್ಯಗಳಲ್ಲಿ ಉಪಚುನಾವಣೆ ಘೋಷಿಸಿದೆ. ಇದರ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸದಂತೆ ಎಲ್ಲಾ ಪಕ್ಷಗಳಿಗೆ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಸೂಚನೆ ನೀಡಿದ್ದಾರೆ.
ಉಪಚುನಾವಣೆ ಘೋಷಣೆಯಾದ ನಂತರ ಈ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರದ ಅಬ್ಬರ ಜೋರಾಗಿಯೇ ಇರಲಿದ್ದು, ಈ ಹಿನ್ನಲಡಯಲ್ಲಿ, ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷಗಳು ಅಥವಾ ಚುನಾವಣಾ ಅಭ್ಯರ್ಥಿ ಪ್ರಚಾರಕ್ಕೆ ಪ್ಲಾಸ್ಟಿಕ್ ಬಳಸಬೇಡಿ ಎಂದು ಕೋರಿದ್ದಾರೆ. ಈ ಮೂಲಕ ಅವರು ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣೆ ಬಂತೆಂದರೆ ಸಾಕು ಪಕ್ಷಗಳು ಭರ್ಜರಿ ಪ್ರಚಾರದ ಭರಾಟೆಯಲ್ಲಿ ತೊಡಗಿರುವುದು ನಾವು ಗಮನಿಸುತ್ತೇವೆ, ಇನ್ನು ಹಾದಿ ಬೀದಿಗಳಲ್ಲಿ, ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳ ತೋರಣ ಮೊದಲಾದಂತೆ ಎಲ್ಲವೂ ಪ್ಲಾಸ್ಟಿಕ್ಮಯವಾಗಿರುತ್ತವೆ. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮನ್ನು ಪ್ರಚಾರ ಪಡಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇವುಗಳನ್ನು ಹತೋಟಿ ತರಲು ಇದೀಗ ಚುನಾವಣಾ ಆಯೋಗದ ಈ ಕ್ರಮ ಸ್ವಾಗತಾರ್ಹ.
2022ರ ವೇಳೆಗೆ ಪ್ಲಾಸ್ಟಿಕ್ ಮುಕ್ತ ಭಾರತವಾಗಲಿದೆ ಎಂದು ಹೇಳಿರುವ ಪ್ರಧಾನಿ ಮೋದಿ ಹಾಗಾಗಿ ದೇಶಾದ್ಯಂತ ಅಕ್ಟೋಬರ್ 2ರಿಂದ ಸಿಂಗಲ್ ಯೂಸ್ (ಒಮ್ಮೆ ಮಾತ್ರ ಬಳಕೆ ಮಾಡಬಹುದಾದ) ಪ್ಲಾಸ್ಟಿಕ್ ಕಡ್ಡಾಯವಾಗಿ ನಿಷೇಧಿಸಿದೆ.