ಮೈಸೂರು, ಸೆ 22 (Daijiworld News/RD): ತನ್ನ ಸ್ವಂತ ಅಣ್ಣ ಎಚ್.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಆಗಲು ಬಿಡದ ಕುಮಾರಸ್ವಾಮಿ, ಇನ್ನು ನನ್ನನ್ನು ಮುಖ್ಯಮಂತ್ರಿ ಆಗಲು ಬಿಡ್ತಾರಾ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಚಿಂತನ - ಮಂಥನ ಸಭೆಯಲ್ಲಿ ಮತನಾಡಿದ ಅವರು, ಸಿದ್ದರಾಮಯ್ಯ ಅಥವಾ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರೇವಣ್ಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಆಯ್ಕೆ ಕುಮಾರಸ್ವಾಮಿ ಅವರಿಗಿತ್ತು. ಆದರೆ ಅವರು ಇದನ್ನು ಮಾಡಲಿಲ್ಲ, ಒಂದು ವೇಳೆ ಹೀಗೆ ಮಾಡಿದ್ದರೆ ಸಮ್ಮಿಶ್ರ ಸರಕಾರ ಉಳಿಯುತ್ತಿತ್ತು. ಸ್ವಂತ ಅಣ್ಣನನ್ನೇ ಉಪಮುಖ್ಯಮಂತ್ರಿಯಗಲು ಬಿಡದ ಹೆಚ್ ಡಿಕೆ, ಇನ್ನು ನನ್ನನ್ನು ಮುಖ್ಯಮಂತ್ರಿಯಾಗಲು ಬಿಡ್ತಾರಾ ಎಂದು ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.
ವಿಶ್ರಾಂತಿಗಾಗಿ ಅಮೆರಿಕಾ ಸೇರಿದಂತೆ ವಿದೇಶ ಪ್ರವಾಸ ಮಾಡುವ ಕುಮಾರಸ್ವಾಮಿ, ಪ್ರತೀ ಬಾರಿ ಸಾ.ರಾ.ಮಹೇಶ್ ಅವರನ್ನು ಕರೆದುಕೊಂಡು ಹೋಗುತ್ತಾರೆ, ಆಗ ಅವರಿಗೆ ನನ್ನ ನೆನಪಾಗಲಿಲ್ಲವೇ ಎಂದು ಜಿಟಿಡಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡ ಚಾಮುಂಡೇಶ್ವರಿ ಶಾಸಕ ಜಿ.ಟಿ,ದೇವೇಗೌಡ, ಅವರು ಬಿಜೆಪಿ ಪಕ್ಷಕ್ಕೆ ತೀರಾ ಹತ್ತಿರವಾಗುತ್ತಿದ್ದು, ಇದೀಗ ಪಕ್ಷದ ಮೇಲಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಜೊತೆಗೆ ಪಕ್ಷದ ಬೆಳವಣಿಗೆಗೆ ಅಡ್ಡಿಪಡಿಸುವುದಿಲ್ಲ ಎಂದು ಜಿಟಿಡಿ ಭರವಸೆ ನೀಡಿದ್ದಾರೆ.