ನವದೆಹಲಿ, ಸೆ.23(Daijiworld News/SS): ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಕಚ್ಚಾ ತೈಲ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಆರು ದಿನಗಳಿಂದ ಇಂಧನ ದರದಲ್ಲಿ ಏರಿಕೆ ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 28ಪೈಸೆ ಹೆಚ್ಚಾಗಿ ರೂ.76.14 ಮತ್ತು ಡೀಸೆಲ್ ದರ 21ಪೈಸೆ ಹೆಚ್ಚಾಗಿ ರೂ69.01ರಂತೆ ಮಾರಾಟವಾಗಿದೆ.
ಹಿಂದಿನ ಆರು ದಿನಗಳಲ್ಲಿ ಒಟ್ಟಾರೆ, ಪ್ರತಿ ಲೀ. ಪೆಟ್ರೋಲ್ಗೆ 1.59 ರೂ., ಡೀಸೆಲ್ಗೆ 1.31ರೂ. ಏರಿಕೆಯಾಗಿದೆ. 2 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ದರ ಏರಿಕೆಯಾಗಿದೆ. ದಿಲ್ಲಿ ಪೆಟ್ರೋಲ್ಗೆ ಕೋಲ್ಕತಾದಲ್ಲಿ 76.32 ರೂ., ಮುಂಬಯಿನಲ್ಲಿ 79.29 ರೂ., ಚೆನ್ನೈಯಲ್ಲಿ 76.52 ರೂ., ಹೊಸದಿಲ್ಲಿಯಲ್ಲಿ 73.62 ರೂ. ಆಗಿದ್ದರೆ, ಪ್ರತಿ ಲೀ. ಡೀಸೆಲ್ಗೆ ಕೋಲ್ಕತಾದಲ್ಲಿ 69.15 ರೂ., ಮುಂಬಯಿನಲ್ಲಿ 70.01 ರೂ., ಚೆನ್ನೈಯಲ್ಲಿ 70.56 ರೂ., ಹೊಸ ದಿಲ್ಲಿಯಲ್ಲಿ 66.74 ರೂ. ಆಗಿತ್ತು.