ನವದೆಹಲಿ, ಸೆ.23(Daijiworld News/SS): ಭಾರತದ ಗಡಿಗಳಲ್ಲಿ 500ಕ್ಕೂ ಹೆಚ್ಚು ಉಗ್ರರು ಗಡಿ ದಾಟಲು ಸಿದ್ಧರಾಗಿ ನಿಂತಿದ್ದಾರೆ. ನಮ್ಮ ಗಡಿ ದಾಟುವ ಸಲುವಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್'ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದು, ಮತ್ತೊಂದು ವಾಯುದಾಳಿಯಲ್ಲ, ಅದಕ್ಕೂ ಮೀರಿದ ಕ್ರಮಕೈಗೊಳ್ಳುತ್ತೇವೆ. ಭಾರತದ ಗಡಿಗಳಲ್ಲಿ 500ಕ್ಕೂ ಹೆಚ್ಚು ಉಗ್ರರು ಗಡಿ ದಾಟಲು ಸಿದ್ಧರಾಗಿ ನಿಂತಿದ್ದಾರೆ. ನಮ್ಮ ಗಡಿ ದಾಟುವ ಸಲುವಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇಂತಹ ಕದನ ವಿರಾಮ ಉಲ್ಲಂಘನೆಗೆ ಯಾವ ರೀತಿ ಉತ್ತರ ನೀಡಬೇಕೆಂಬುದು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಅಡಗಿ ಕುಳಿತಿರುವ ಉಗ್ರರು ಹಾಗೂ ಪಾಕಿಸ್ತಾನದಲ್ಲಿರುವ ಅವರ ಮುಖ್ಯಸ್ಥರ ನಡುವೆ ಸಂವಹನ ಸ್ಥಗಿತಗೊಂಡಿದೆ. ಆದರೆ, ಜನರಿಂದ ಜನರ ನಡುವಿನ ಸಂಪರ್ಕ ಇನ್ನೂ ಉಳಿದಿದೆ. ಸೇನೆ ಎಂತಹದ್ದೇ ಪರಿಸ್ಥಿತಿ ಎದುರಾದಲೂ ಅದನ್ನು ಎದುರಿಸಲು ಸಿದ್ಧವಾಗಿದೆ. ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಗಡಿಯಲ್ಲಿ ನಾವು ಚಟುವಟಿಕೆಗಳಿಂದ ಇದ್ದು, ಸಾಕಷ್ಟು ಒಳನುಸುಳಿಕೆಗಳು ವಿಫಲಗೊಳ್ಳುವಂತೆ ಮಾಡಿದ್ದೇವೆ. ಕದನ ವಿರಾಮದಂತಹ ವರ್ತನೆಗೆ ಯಾವ ರೀತಿಯ ನಡೆ ತೆಗೆದುಕೊಳ್ಳಬೇಕೆಂಬುದು ನಮ್ಮ ಸೇನೆಗೆ ತಿಳಿದೇ ಇದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗತಿಗೆ ಬಂದಿವೆ. ಎಂದಿನಂತೆಯೇ ಅಂಗಡಿ ಮುಗ್ಗಟ್ಟುಗಳು ತೆರೆಯುತ್ತಿವ. ಶೆಟರ್'ಗಳನ್ನು ಕೆಳಗೆ ಬಿಟ್ಟಿರುವುದು ಬಿಟ್ಟರೆ, ವ್ಯಾಪಾರಗಳು ಎಂದಿನಂತೆಯೇ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.