ನವದೆಹಲಿ, ಸೆ.23(Daijiworld News/SS): ಭಾರತದಲ್ಲಿರುವ ಮುಸ್ಲಿಮರು ಇಸ್ಲಾಂ ರಾಷ್ಟ್ರಗಳಲ್ಲಿರುವ ಮುಸ್ಲಿಮರಿಗಿಂತಲೂ ಅದೃಷ್ಟವಂತರು ಎಂದು ಖ್ಯಾತ ಪತ್ರಕರ್ತ ಮಾರ್ಕ್ ಟುಲಿ ಹೇಳಿದ್ದಾರೆ.
ಭಾರತ ಸರ್ವಧರ್ಮಗಳ ತವರು ಎಂದು ಹೇಳಿದ ಮಾರ್ಕ್ ಟುಲಿ, ಭಾರತ ಅಧ್ಯಾತ್ಮದ ತಪೋಭೂಮಿ. ಎಲ್ಲ ಧರ್ಮದವರಿಗೂ ಅವರವರ ಆಚರಣೆಗಳನ್ನು ಪಾಲಿಸಲು ಮುಕ್ತ ಅವಕಾಶ ನೀಡಿದೆ. ಮುಸ್ಲಿಮರ ವಿಚಾರಕ್ಕೆ ಬಂದಲ್ಲಿ ಇಲ್ಲಿ ಸಂಪ್ರದಾಯ ಪಾಲನೆಯಲ್ಲಿ ಹೇರಿಕೆಯ ಕಟ್ಟುಪಾಡುಗಳಿಲ್ಲ. ಅವರವರ ಧರ್ಮನಿಷ್ಠೆಗೆ ಬಿಡಲಾಗಿದೆ ಎಂದು ಹೇಳಿದರು.
ಬೇರೆ ಇಸ್ಲಾಂ ರಾಷ್ಟ್ರಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ಭಾರತದ ಮುಸ್ಲಿಮರು ಅದೃಷ್ಟವಂತರು. ಅವರಿಗೆ ತಮಗೆ ಸರಿ ಎನಿಸಿದ ಇಸ್ಲಾಂ ಸಂಪ್ರದಾಯಗಳನ್ನು ಪಾಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.