ನವದೆಹಲಿ, ಸೆ 23 (Daijiworld News/RD): ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಹಾಗೂ ವಿಧಾನಸಭೆ ಕ್ಷೇತ್ರದ ಬೈ ಎಲೆಕ್ಷನ್ಗೆ ತಡೆಯಾಜ್ಞೆ ನೀಡುವುದಕ್ಕೆ ಸಂಬಂಧಪಟ್ಟಂತೆ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಎನ್.ವಿ ರಮಣ ಅವರ ನೇತೃತ್ವದ ತ್ರಿಸದ್ಯಸ ಪೀಠ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿದೆ.
ಈ ಮೂಲಕ ಅನರ್ಹ ಶಾಸಕರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದೆ. 15 ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತೆ ಇಂದಿನಿಂದ ನಾಮಮತ್ರ ಸಲ್ಲಿಕೆ ಆರಂಭವಾಗಿದ್ದು, ಸೆ. 30ರ ವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶವಿದ್ದು, ವಾಪಸ್ಸು ಪಡೆಯುವುದಕ್ಕೆ ಅ. 3 ಕೊನೆಯ ದಿನಾಂಕವಾಗಿದೆ. 21ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬರಲಿದೆ. ಅನರ್ಹ ಶಾಸಕರು ಸಲ್ಲಿರುವ ಅರ್ಜಿಗೆ ಸಂಬಂಧಪಟ್ಟಂತೆ ಅಂತಿಮ ನ್ಯಾಯಾ ನೀಡುವುದಕ್ಕೆ ಇನ್ನೇರಡು ವಾರಗಳು ಬೇಕಾಗಿದ್ದು, ಹೀಗಾಗಿ ಅಲ್ಲಿಗೆ ಚುನಾವಣೆ ಕನಸು ಕನಸಾಗೇ ಉಳಿಯಲಿದೆ ಎನ್ನಲಾಗುತ್ತಿದ್ದು ಮುಂದೆ ಕಾದು ನೋಡಬೇಕಾಗಿದೆ.
ಅಕ್ಟೋಬರ್ 21ರಂದು ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಲಾಗಿದ್ದು, ಸೆ. 30ರ ವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶವಿದ್ದು, ವಾಪಸ್ಸು ಪಡೆಯುವುದಕ್ಕೆ ಅ. 3 ಕೊನೆಯ ದಿನಾಂಕ ವಾಗಿದೆ. 21ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬರಲಿದೆ ಕಪಿಲ್ ಸಿಬಲ್ ಅವರು ನ್ಯಾಯಾಲಯದ ಮುಂದೆ ಬುಧವಾರಕ್ಕೆ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನ್ಯಾಯಾಪೀಠ ಬುಧವಾರಕ್ಕೆ ವಿಚಾರಣೆ ಮುಂದೂಡಿತು.