ನವದೆಹಲಿ, ಸೆ.23(Daijiworld News/SS): ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತೀಯ ವಾಯುಪಡೆಯ ದಾಳಿಯಿಂದ ಸಂಪೂರ್ಣ ನಾಶವಾಗಿದ್ದ ಬಾಲಾಕೋಟ್ನಲ್ಲಿನ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರ ಇದೀಗ ಭಾರತದಲ್ಲಿ ಕುಕೃತ್ಯ ನಡೆಸುವ ಸಲುವಾಗಿ ಮತ್ತೆ ತಲೆಯೆತ್ತಿ ನಿಂತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತೀಯ ವಾಯುಪಡೆ ಏರ್ ಸರ್ಜಿಕಲ್ ಸ್ಟೈಕ್ ನಡೆಸಿದ ಬಳಿಕ ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆ ಸಂಪೂರ್ಣ ಧ್ವಂಸವಾಗಿತ್ತು. ಆದರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ಸರಕಾರ ಹಿಂಪಡೆದ ಬಳಿಕ ಈ ತರಬೇತಿ ಶಿಬಿರಕ್ಕೆ ಪುನರ್ಜೀವ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ 370ನೇ ಕಲಂ ಹಿಂಪಡೆದಾಗ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್, ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಅವ್ಯಾಹತವಾಗಿ ನಡೆಯಲಿದೆ ಎಂದು ಭಾರತಕ್ಕೆ ಸವಾಲು ಹಾಕಿದ್ದರು.
14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ವಾಹನಗಳ ಮೇಲೆ ನಡೆಸಲಾಗಿದ್ದ ಉಗ್ರರ ದಾಳಿಗೆ ಪ್ರತೀ ಕಾರವಾಗಿ ಭಾರತೀಯ ವಾಯು ಪಡೆಯು ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್ಗೆ ಸಮೀಪವಿರುವ ಬಾಲಾಕೋಟ್ನಲ್ಲಿದ್ದ ಜೈಶ್-ಎ- ಮೊಹಮ್ಮದ್ ಉಗ್ರ ಸಂಘ ಟನೆಯ ತರಬೇತಿ ಶಿಬಿರದ ಮೇಲೆ ಫೆ. 27ರಂದು ವಾಯು ದಾಳಿ ನಡೆಸಿ, ಅದನ್ನು ಧ್ವಂಸಗೊಳಿಸಿತ್ತು.