ದಾವಣಗೆರೆ, ಸೆ 23 (Daijiworld News/RD): ಉಪಚುನಾವಣೆ ಗೆಲುವು ಸಾಧಿಸಲು ಬಿಜೆಪಿ ತಂತ್ರ ಕುತಂತ್ರಗಳೆರಡನ್ನೂ ಮಾಡುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ.ರವೀಂದ್ರನಾಥ್ ಹೇಳಿದರು.
ದಾವಣಗೆರೆಯಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಬಿಜೆಪಿ ಈಗಲೂ ಅಧಿಕಾರದಲ್ಲಿದೆ. ಅದು ಹೀಗೆ ಮುಂದುವರೆಯಬೇಕು ಎಂದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಹಾಗಾಗಿ ಗೆಲುವು ಸಾಧಿಸಲು ಬೇಕಾದಂತಹ ಕುತಂತ್ರ ಹಾಗೂ ತಂತ್ರಗಳನ್ನು ಮಾಡಿ ಗೆಲುವು ಸಾಧಿಸುತ್ತೇವೆ ಎಂದರು.
"ಈಗಾಗಲೇ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆಯನ್ನು ಪಕ್ಷ ಎದುರಿಸುತ್ತದೆ. ನಮಗೆ ಪಕ್ಷದಿಂದ ಎಲ್ಲಿಗೆ ಚುನಾವಣೆ ಪ್ರಚಾರಕ್ಕೆ ಹೋಗಬೇಕು ಅನ್ನುತ್ತಾರೋ ಅಲ್ಲಿಗೆ ಹೋಗುವುದಷ್ಟೇ ನನ್ನ ಕೆಲಸ ಎಂದು ಹೇಳಿದರು.