ಮೈಸೂರು, ಸೆ 24 (Daijiworld News/MSP): ಮೈಸೂರಿನ ಪುಷ್ಪಾಶ್ರಮ ಧ್ಯಾನವನ ಸಂಸ್ಥೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಧ್ಯಾನವನದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಧ್ಯಾತ್ಮಿಕತೆಗೆ ಸಂಬಂಧಿಸಿದ ಯುಜಿ ಮತ್ತು ಪಿಜಿ ಕೋರ್ಸ್ ಗಳಿವೆ. ಈ ಸಂಸ್ಥೆಯೂ ಮೈಸೂರಿನ ಸೈಂಟ್ ಫಿಲೋಮಿನ ಸ್ವಾಯತ್ತ ಕಾಲೇಜಿಗೆ ಒಳಪಟ್ಟಿದೆ.
ಬೆಳ್ಳಿಹಬ್ಬದ ಅಂಗವಾಗಿ ನಡೆದ ಸಮಾರಂಭದಲ್ಲಿ 45 ಕ್ಕೂ ಹೆಚ್ಚು ಧರ್ಮಗುರುಗಳು ಮತ್ತು 450 ಧರ್ಮ ಭಗಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಡ್ಯ ಬಿಷಪ್ ಸೆಬಾಸ್ಟಿಯನ್ ಅಡಯಂತ್ರತ್ ಪ್ರಧಾನ ಬಲಿ ಪೂಜೆ ನೇತೃತ್ವ ವಹಿಸಿದರು.
ಆ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ. ಚಾಲ್ಸ್ ಸೆರವೋ ಓಸಿಡಿ ಹಾಗೂ ಇತರ ಗಣ್ಯ ವ್ಯಕ್ತಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಧ್ಯಾನವನದ ಸ್ಥಾಪಕರಾದ ಬಿಷಪ್ ಸೆಭಾಸ್ಟಿಯನ್ ಹಾಗೂ ಫಾ. ಗ್ರೆಗೊರಿ ಡಿ ಸೋಜಾ ಇವರನ್ನು ಸನ್ಮಾನಿಸಲಾಯಿತು. ಧ್ಯಾನವನದ ಧರ್ಮ ಭಗಿನಿಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಫಾ. ಡೊಮಿನಿಕ್ ವಾಸ್ ಕಾರ್ಯಕ್ರಮ ನಿರೂಪಿಸಿದರು.