ಬೆಂಗಳೂರು, ಸೆ 24 (Daijiworld News/RD): ಸಿದ್ದರಾಮಯ್ಯ ಮತ್ತು ಹೆಚ್ ಡಿಕೆ ನಡುವೆ ಕಾದಾಟ ನಡೆಯುತ್ತಿದ್ದು, ಸಿದ್ದರಾಮಯ್ಯರಂತಹ ಅದೆಷ್ಟೋ ಗಿಳಿಗಳನ್ನು ಬೆಳೆಸಿದವರು ನಮ್ಮಪ್ಪ ಎಂದು ಹೆಚ್ ಡಿಕೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಜನರ ಆಶೀರ್ವಾದದಿಂದ 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು ಗಿಣಿಯ ಹಂಗಿನಿಂದಲ್ಲ ಎಂದು ಕಿಡಿಕಾಡಿದ್ದಾರೆ.
ಈ ಬಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕುಮಾರಸ್ವಾಮಿಯವರೇ, ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ' ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಭಿನ್ನಾಭಿಪ್ರಾಯಗಳನ್ನು ತೋರಿಸಿಕೊಳ್ಳದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇದೀಗ ಇವರಿಬ್ಬರ ನಡುವ ಗಿಳಿ ಜಗಳ ನಡೆಯುತ್ತಿದ್ದು, ನಾನು ನಂಬಿದ ಗಿಳಿಗಳು ಹದ್ದಾಗಿ ಕಾಡಲಾರಂಭಿಸಿವೆ. ಹದ್ದನ್ನು ಗಿಳಿಯೆಂದು ನಂಬಿ ಮೈತ್ರಿ ಮಾಡಿಕೊಂಡೆವು. ಅದು ಕುಕ್ಕದೇ ಬಿಡುತ್ತದೆಯೇ ಎಂದು ಕಿಡಿಕಾರಿದ್ದ ಸಿದ್ದರಾಮಯ್ಯ, ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ನನ್ನನ್ನು ಈ ಜಿಲ್ಲೆಯ ಜನರು ಬೆಳೆಸಿದ್ದೇ ಹೊರತು ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯನವರಿಂದ ನಾನೇನೂ ಬೆಳೆದಿಲ್ಲ. ಸಿದ್ದರಾಮಯ್ಯನವರಂತಹ ಎಷ್ಟೋ ಗಿಳಿಗಳನ್ನು ನಮ್ಮಪ್ಪ ಬೆಳೆಸಿದ್ದಾರೆ, ಅವುಗಳು ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತು ಎಂದು ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿಯವರ ಈ ಹೇಳಿಕೆಗೆ ಟ್ವೀಟ್ ಮಾಡಿ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮನ್ನು ಹೇಗೆ ಜಿಲ್ಲೆಯ ಜನ ಬೆಳೆಸಿದ್ದಾರೆ ಹಾಗೇಯೇ ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ 5 ವರ್ಷ ಮುಖ್ಯಮಂತ್ರಿಯಾಗಿದ್ದೇ, ಹೊರತು ಜೆಡಿಎಸ್ ಪಕ್ಷದ ಅಥವಾ ದೇವೆಗೌಡರ ಹಂಗಿನಿಂದಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.