ನವದೆಹಲಿ, ಸೆ 24 (Daijiworld News/MSP): ರಿಸರ್ವ್ ಬ್ಯಾಂಕ್ ಮಂಗಳವಾರ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ (ಪಿಎಂಸಿ ಬ್ಯಾಂಕ್) ಗೆ ಕಾರ್ಯಾಚರಣೆಯ ನಿರ್ಬಂಧಗಳನ್ನು ವಿಧಿಸಿದೆ. ಹೀಗಾಗಿ ಪಂಜಾಬ್ ಹಾಗೂ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಈ ಬ್ಯಾಂಕ್ ಗ್ರಾಹಕರು ಇನ್ಮುಂದೆ ಕೇವಲ 1 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ.
ಪಿಎಮ್ಸಿ ಬ್ಯಾಂಕ್ಗೆ ಆರ್ಬಿಐ ನಿರ್ದೇಶನದಂತೆ, ಪ್ರತಿ ಖಾತೆಗೆ ವಿತ್ ಡ್ರಾ ಲಿಮಿಟ್ ನ್ನು 1,000 ರೂ.ಗೆ ನಿಲ್ಲಿಸಿದೆ ಮತ್ತು ಯಾವುದೇ ಹೊಸ ಸಾಲಗಳನ್ನು ಮಾಡಲು ಬ್ಯಾಂಕಿಗೆ ಅವಕಾಶವಿಲ್ಲ. ಈ ಬಗ್ಗೆ ಬ್ಯಾಂಕ್ ನಿಂದ ಗ್ರಾಹಕರಿಗೆ ಈ ಸಂದೇಶ ಬರಲು ಪ್ರಾರಂಭವಾಗಿದ್ದು ಬ್ಯಾಂಕ್ ಈ ಸೂಚನೆ ದೊಡ್ಡ ಕೋಲಾಹಲ ಸೃಷ್ಟಿಸಿದೆ.
ಭ್ರಷ್ಟಾಚಾರ ಆರೋಪದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮುಂಬೈ ಮೂಲದ ಪಂಜಾಬ್ ಹಾಗೂ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಆರು ತಿಂಗಳ ನಿಷೇಧ ಹೇರಿದೆ. ಆದ್ರೆ ಪಿಎಂಸಿ ಬ್ಯಾಂಕ್ ಪರವಾನಗಿ ರದ್ದಾಗುವುದಿಲ್ಲವೆಂದು ಆರ್.ಬಿ.ಐ. ಸ್ಪಷ್ಟಪಡಿಸಿದೆ.
ಆರ್ಬಿಐ ಪ್ರಕಟಣೆ ಹೊರಬಿದ್ದ ಕೂಡಲೇ ನೂರಾರು ಗ್ರಾಹಕರು ಪಿಎಂಸಿ ಬ್ಯಾಂಕ್ ಶಾಖೆಗಳಿಗೆ ಧಾವಿಸುತ್ತಿದ್ದಾರೆ.
ಆರ್.ಬಿ.ಐ. ಜಾರಿ ಮಾಡಿರುವ ಆದೇಶದ ಪ್ರಕಾರ, ಬ್ಯಾಂಕ್ ಹೊಸ ಸಾಲ ನೀಡುವಂತಿಲ್ಲ. ಬ್ಯಾಂಕ್ ಎಲ್ಲ ವಹಿವಾಟಿನ ಮೇಲ್ವಿಚಾರಣೆ ನಡೆಯಲಿದೆ. ಇದು ಖಾತೆದಾರರ ಮೇಲೆ ಪರಿಣಾಮ ಬೀರಿದೆ. ಯಾವುದೇ ಖಾತೆ ಹೊಂದಿರುವ ವ್ಯಕ್ತಿ 1000 ಕ್ಕಿಂತ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ನಲ್ಲಿ ಗ್ರಾಹಕರು ಹಣವನ್ನು ಜಮಾ ಮಾಡುವಂತಿಲ್ಲ. ಹಾಗೆ ಹೊಸ ಎಫ್ಡಿ ಖರೀದಿ ಮಾಡುವಂತಿಲ್ಲ.