ಹಾಸನ, ಸೆ 25 (DaijiworldNews/SM): ಪಾರ್ಕ್ ಗಳಲ್ಲಿ ಪ್ರೇಮಿಗಳು ಸರಪ ಸಲ್ಲಾಪವಾಡೋದನ್ನು ನಾವು ಕಂಡಿದ್ದೇವೆ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಪ್ರದೇಶದತ್ತ ಲಗ್ಗೆ ಇಟ್ಟಿದೆ. ಅಲ್ಲದೆ, ವೀಡಿಯೋ ಮಾಡಿ ವೈರಲ್ ಮಾಡುವಷ್ಟು ಧೈರ್ಯ ಕೂಡ ಪ್ರೇಮಿಗಳಿಗೆ ಬಂದಿದೆ.
ಯುವ ಜೋಡಿಯೊಂದು ಸಾರ್ವಜನಿಕ ಸಂಪರ್ಕದ ಸರಕಾರಿ ಬಸ್ಸೊಂದರಲ್ಲಿ ಸರಪ ಸಲ್ಲಾಪವಾಡಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ಬಸ್ ನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರನ್ನೇ ನಾಚುವಂತೆ ಮಾಡಿದ್ದಾರೆ. ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳು ಪ್ರೇಮ ಸಲ್ಲಾಪವಾಡಿದ್ದಾರೆ. ಇವರ ಅಸಭ್ಯ ವರ್ತನೆಯಿಂದ ಸಹಪ್ರಯಾಣಿಕರು ಮುಜುಗರಕ್ಕೊಳಗಾಗಿದ್ದಾರೆ.
ಈ ಜೋಡಿ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಸ್ ನಲ್ಲಿ ಮತ್ತೊಂದು ಸೀಟ್ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಅಸಭ್ಯ ವರ್ತನೆಯನ್ನು ಸೆರೆ ಹಿಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಸ್ ನಲ್ಲಿ ಮಕ್ಕಳು, ಪೋಷಕರು, ದಂಪತಿಗಳು ಸಹ ಪ್ರಯಾಣ ಮಾಡುವ ಸಂದರ್ಭದಲ್ಲಿ ಇಂತಹ ವರ್ತನೆಯಿಂದ ಮುಜುಗರಕ್ಕೊಳಗಾಗುವುದು ಸಾಮಾನ್ಯವಾಗಿದೆ.