ಮುಂಬೈ, ಸೆ 27 (Daijiworld News/RD): ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಶರದ್ ಪವಾರ್ ಇದೀಗ ತಮ್ಮ ಯೋಚನೆಯನ್ನು ಬದಲಾಯಿಸಿಕೊಂಡು ಇಡಿ ಕಚೇರಿಗೆ ಹೋಗದಿರಲು ನಿರ್ಧರಿಸಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ಸಮನ್ಸ್ ನೀಡದಿದ್ದರೂ ಇಂದು ಮಧ್ಯಾಹ್ನ 2 ಗಂಟೆಗೆ ಇಡಿ ಕಚೇರಿಗೆ ಭೇಟಿ ನೀಡುವುದಾಗಿ ಪವಾರ್ ಘೋಷಣೆ ಮಾಡಿದ್ದರು. ಆದರೆ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಬಾರ್ವೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುಕೊಳ್ಳುವ ಉದ್ದೇಶದಿಂದ, ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ನಲ್ಲಿರುವ ಇ.ಡಿ. ಕಚೇರಿ ತೆರಳದಂತೆ ಪವಾರ್ರನ್ನು ವಿನಂತಿಸಿಕೊಂಡರು. ಎನ್ಸಿಪಿ ಕಚೇರಿ ಕೂಡ ಇದೇ ಪ್ರದೇಶದಲ್ಲಿರುವ ಕಾರಣ ಎನ್ಸಿಪಿ ಬೆಂಬಲಿಗರು ಶರದ್ಪವಾರ್ ಭೇಟಿಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಈ.ಡಿ.ಅಧಿಕಾರಿಗಳು ತಾವು ನಮ್ಮ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಶರದ್ ಪವಾರ್ಗೆ ಮಾಹಿತಿ ನೀಡಿದ್ದಾರೆ. ವಿಪಕ್ಷ ನಾಯಕರುಗಳ ಘನತೆ ಹಾಳು ಮಾಡಲು ಈ.ಡಿ. ತನ್ನ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ. ಶಿವಸೇನೆ ಸಹಿತ ನನಗೆ ಬೆಂಬಲ ವ್ಯಕ್ತಪಡಿಸಿರುವ ಎಲ್ಲ ಪಕ್ಷಗಳಿಗೂ ನಾನು ಧನ್ಯವಾದ ಹೇಳುವೆ.