ನ್ಯೂಯಾರ್ಕ್, ಸೆ 27(DaijiworldNews/SM): ಭಯೋತ್ಪಾದನೆ ಜಗತ್ತಿಗೆ ಅತೀ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತೇ ಒಂದಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಅವರು, ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆಗೆ ಭಯೋತ್ಪಾದನೆ ಮಾರಕವಾಗಿದೆ. ಇದರ ಸಂಬಂಧ ವಿಶ್ವ ವೇದಿಕೆಯಲ್ಲಿ ದೇಶ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಮಾನವೀಯ ಸಮುದಾಯದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಭಯೋತ್ಪಾದನೆ ಪ್ರಮುಖವಾಗಿದೆ. ವಿಶ್ವಸಂಸ್ಥೆಯ ತತ್ತ್ವಗಳಿಗೆ ಇದು ವಿರುದ್ಧವಾಗಿದೆ. ಭಯೋತ್ಪಾದನೆ ಮಟ್ಟ ಹಾಕಬೇಕಂದರೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಾಗಬೇಕು. ಭಯೋತ್ಪಾದನೆಯನ್ನು ಎದುರಿಸಲು ಒಮ್ಮತದಿಂದ ಮುನ್ನುಗ್ಗಬೇಕೆಂದರು.
ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ. ಅದಕ್ಕಾಗಿಯೇ ಭಯೋತ್ಪಾದನೆಯನ್ನು ಎದುರಿಸಲು ಪ್ರಾಮಾಣಿಕತೆ ಮತ್ತು ಕೋಪ ಎರಡೂ ಇದೆ.. ಭಯೋತ್ಪಾದನೆ ಮಾನವೀಯ ವಿಶ್ವದ ಮುಂದಿರುವ ದೊಡ್ಡ ಸವಾಲಾಗಿದೆ.ಇದು ವಿಶ್ವಸಂಸ್ಥೆಯ ನಿರ್ಮಾಣಕ್ಕೆ ಕಾರಣವಾಗಿರುವ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.