ಬೆಂಗಳೂರು, ಸೆ 28 (Daijiworld News/RD): ನಿಮ್ಮ ಮನೆಯಲ್ಲಿ ಟಿ.ವಿ.ಚಾನೆಲ್ ಗಳು ದಿನಕ್ಕೆ 10-15 ನಿಮಿಷ ಸಿಗ್ನಲ್ ಕಳೆದುಕೊಳ್ಳುತ್ತಿದ್ದರೆ, ಅದು ಇನ್ನು ಮುಂದಿನ 8,10 ದಿನಗಳವರೆಗೂ ಮುಂದುವರಿಯಲಿದೆ.
ಇದೀಗ ಈ ಸಮಸ್ಯೆಗೆ ಸೂರ್ಯನ ಕೇಂದ್ರದ ಜತೆಗೆ ಭೂಮಿಯ ಸಮಭಾಜಕ ರೇಖೆ ಸಮಾನಾಂತರವಾಗಿ ಬಂದಿರುವ ಪರಿಣಾಮ ವಿಷುವತ್ ಸಂಕ್ರಮಣ ಘಟಿಸಿರುವುದೇ ಇದಕ್ಕೆ ಕಾರಣ. ಸೌರಮಂಡಲದ ಈ ವಿದ್ಯಮಾನವನ್ನು ಸೋಲಾರ್ ಇಂಟರ್ ಫರೆನ್ಸ್ ಅಥವಾ ಸೋಲಾರ್ ಔಟೇಜ್ ಎನ್ನಲಾಗುತ್ತದೆ.
ಇದು ಸೌರಮಂಡಲದಲ್ಲಿ ವರ್ಷಕ್ಕೆರಡು ಬಾರಿ ಸಂಭವಿಸುವ ಈ ನಿರಂತರ ಪ್ರಕ್ರಿಯೆ ಇದೀಗ ಸೆಪ್ಟೆಂಬರ್ 3ನೇ ವಾರದಿಂದ ಅಕ್ಟೋಬರ್ 2ನೇ ವಾರದವರೆಗೂ ವಿಶ್ವದ ನಾನಾ ಭಾಗಗಳಲ್ಲಿ ಸಂಭವಿಸುತ್ತಿದೆ. ಇದರಿಂದ ಟಿವಿ ವೀಕ್ಷಣೆಗೆ ಅಡಚಣೆ ಉಂಟಾಗಬಹುದೆಂದು ಕೇಬಲ್ ಸೇವಾ ಸಂಸ್ಥೆಗಳು ಎಚ್ಚರಿಕೆ ನೀಡುತ್ತಿವೆ.
ಈ ವಿದ್ಯಮಾನದಿಂದ ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹಗಳ ತರಂಗಾಂತರಗಳಲ್ಲಿ ಸಂಪೂರ್ಣ ಕಡಿತ ಅಥವಾ ಗುಣಮಟ್ಟ ಕಡಿಮೆ ಆಗುವುದರಿಂದ, ಟಿ.ವಿ ವೀಕ್ಷಣೆ, ಷೇರು ಮಾರುಕಟ್ಟೆ ಆನ್ ಲೈನ್ ಹಣಕಾಸು ವಹಿವಾಟು, ಎಟಿಎಂ ಸೇವೆ ಸೇರಿದಂತೆ ಇನ್ನಿತರ ಸೇವೆಗಳಲ್ಲಿ ವ್ಯತ್ಯಯವಾಗಬಹುದು.