ಜಮ್ಮು ಮತ್ತು ಕಾಶ್ಮೀರ, ಸೆ 28 (DaijiworldNews/SM): ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ವಿಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಭಾರತೀಯ್ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಇಲ್ಲಿನ ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಭಾರತೀಯ ಯೋಧರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಹಾಗೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಬೆಳಗ್ಗೆ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ತಕ್ಷಣ ಅಲರ್ಟ್ ಆದ ಭಾರತೀಯ ಯೋಧರು ಉಗ್ರರ ವಿರುದ್ಧ ಗುಂಡಿನ ಪ್ರತಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಉಗ್ರರು ಪರಾರಿಯಾಗಿದ್ದರು. ಹಾಗೂ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ಹಾಗೂ ಮನೆ ಮಂದಿಯನ್ನು ತಮ್ಮ ಒತ್ತೆಯಾಳುಗಳಾಗಿಸಿದ್ದರು.
ಕೂಡಲೇ ಮನೆಯನ್ನು ಸುತ್ತುವರಿದ ಭಾರತೀಯ ಯೋಧರು ಮೂವರು ಉಗ್ರರನ್ನು ಹತ್ಯೆ ಮಾಡಿದ್ದು ಒತ್ತೆಯಾಳಾಗಿದ್ದ ವೃದ್ಧದನ್ನು ರಕ್ಷಿಸಿದ್ದಾರೆ. ಇದೇ ವೇಳೆ ಉಗ್ರರ ಕೈಯಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.