ನವದೆಹಲಿ, ಸೆ 29(Daijiworld News/SS): ಕೇಂದ್ರ ಹಣಕಾಸು ಸಚಿವಾಲಯ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆ ಜೊತೆಗೆ ಜೋಡಣೆ ಮಾಡುವ ದಿನಾಂಕವನ್ನು ಮತ್ತೆ ವಿಸ್ತರಿಸಿದೆ.
ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆ ಜೊತೆಗೆ ಜೋಡಣೆ ಮಾಡುವ ದಿನಾಂಕವನ್ನು ಈ ಹಿಂದೆ ಮಾರ್ಚ್ 31ರಂದು 6 ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು. ಇದೀಗ ಅವಧಿಯನ್ನು ಮತ್ತೆ ಸೆಪ್ಟೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಈ ದಿನಾಂಕದೊಳಗೆ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯ ಜೊತೆ ಜೋಡಣೆ ಮಾಡಿಕೊಳ್ಳದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಫ್ಲಾಗ್ ಶಿಪ್ ಆಧಾರ್ ಯೋಜನೆ ಸಾಂವಿಧಾನಿಕವಾಗಿ ಮೌಲ್ಯಯುತವಾಗಿದ್ದು ಆದಾಯ ತೆರಿಗೆ ವಿವರ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್ ಹಂಚಿಕೆಗೆ ಅತ್ಯಗತ್ಯ ಎಂದು ಆದೇಶ ಹೊರಡಿಸಿತ್ತು.