ಲಖನೌ, ಸೆ.29(Daijiworld News/SS): ದೇಶದ ನಾಲ್ಕು ರಾಜ್ಯಗಳ ಪೈಕಿ ಮಳೆಯಿಂದಾಗಿ ಅತ್ಯಂತ ಹೊಡತಕ್ಕೆ ಬಿದ್ದ ರಾಜ್ಯವೆಂದರೆ ಅದು ಉತ್ತರ ಪ್ರದೇಶ. ಇದೀಗ ಇಲ್ಲಿ ಮತ್ತೆ ಹೆಚ್ಚಾಗಿದೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಮಳೆ ಅವಘಡಗಳಲ್ಲಿ ಈವರೆಗೂ 72 ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ, ಮಳೆಯಿಂದಾಗಿ ರಾಜಧಾನಿ ಲಖನೌ ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ. ಉತ್ತರ ಪ್ರದೇಶದಲ್ಲಿ ಮಳೆಯಿಂದಾಗಿ 24 ಮಂದಿ ಬಲಿಯಾಗಿದ್ದು, ಸಂತ್ರಸ್ಥರ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯಾನಾಥ್ ತಲಾ 4 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಬಿಹಾರದಲ್ಲೂ ಅತೀ ಹೆಚ್ಚು ಮಳೆಯಾಗಿದ್ದು, ಸಂಚಾರ, ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ದೊಡ್ಡ ವೈದ್ಯಕೀಯ ಕಾಲೇಜು ನಳಂದಾ ವೈದ್ಯಕೀಯ ಕಾಲೇಜು ಮುಳುಗಡೆಯಾಗಿದೆ. ಸೆ.28ರಿಂದ ಈವರೆಗೂ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 102.2 ಮಿ ಮೀ ಮಳೆಯಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್'ನಲ್ಲಿ 102 ಮಿಮೀ, ವಾರಣಾಸಿಯಲ್ಲಿ 84.2 ಮಿಮೀ ಮಳೆಯಾಗಿದೆ.