ನವದೆಹಲಿ, ಸೆ 30 (DaijiworldNews/SM): ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರು ಜೈಲಿನಲ್ಲೇ ಉಳಿಯಬೇಕಾಗಿದೆ. ದೆಹಲಿ ಹೈಕೋರ್ಟ್ ಸೋಮವಾರ ಮತ್ತೆ ನಿರಾಶೆಯುಂಟುಮಾಡಿದೆ.
ಅರ್ಜಿ ವಿಚಾರಣೆ ಹಾಗೂ ಜಾಮೀನಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಕಾಂಗ್ರೆಸ್ ಪಕ್ಷದ ಪ್ರಭಾವಿಗಳಲ್ಲಿ ಚಿದು ಒಬ್ಬರಾಗಿದ್ದಾರೆ ಎಂದಿದೆ. ಈ ಕಾರಣದಿಂದಾಗಿ ಅವರು ಸಾಕ್ಷಿಗಳ ಮೆಲೆ ಪ್ರಭಾವಬೀರುವ ಸಾಧ್ಯತೆ ಹೆಚ್ಚಿದೆ ಎನ್ನುವ ಕಾರಣವನ್ನು ಮುಂದಿಟ್ಟಿರುವ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಆಗಸ್ಟ್ 21ರಂದು ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಅವರ ನಿವಾಸದಿಂದಲೇ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿಗಾಗಿ ನೇರವಾಗಿ ಹೈಕೊರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಚಿದು ಅವರಿಗೆ ತಿಹಾರ ಜೈಲೇ ಗತಿ ಎಂಬಂತಾಗಿದೆ.