ಬೆಂಗಳೂರು, ಅ 1 (Daijiworld News/RD):ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಜೈನುಲ್ಲಾಬ್ಬೀನ್ ವಿಚಾರಣೆ ವೇಳೆ ದೇಶದಲ್ಲಿ ನಡೆದ ಬಹುತೇಕ ಬಾಂಬ್ ದಾಳಿಗೆ ಸ್ಫೋಟಕಗಳನ್ನು ಮಂಗಳೂರಿನ ಮೂಲಕವೇ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ವಿಚಾರ ಬಯಲಿಗೆ ಬಂದಿದೆ.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮುಂಬೈನ ಅರ್ಥರ್ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಕರೆತಂದಿರುವ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಜೈನುಲ್ಲಾಬ್ಬೀನ್, ಆತನ ವಿಚಾರಣೆ ವೇಳೆ ದೇಶದಲ್ಲಿ ನಡೆದ ಬಹುತೇಕ ಬಾಂಬ್ ಸ್ಫೋಟಕ ಕೃತ್ಯಗಳಿಗೆ ಸ್ಫೋಟಕ ಸಾಧನಗಳನ್ನು ಮಂಗಳೂರಿನ ಮೂಲಕವೇ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರಿನ ಮೂಲಕ 2011ರಿಂದ 2014ರವರೆಗೆ ದೇಶದಲ್ಲಿ ನಡೆದ ಬಾಂಬ್ ಸ್ಫೋಟ ಕೃತ್ಯಗಳಿಗೆ ಸ್ಫೋಟಕಗಳನ್ನು ರವಾನಿಸಿದೆ ಎಂಬುದು ಗೊತ್ತಾಗಿದ್ದು, ಆರೋಪಿಗಳಿಗೆ ಮಂಗಳೂರಿನಲ್ಲಿ ಸ್ಫೋಟಕಗಳನ್ನು ನೀಡುತ್ತಿದ್ದವರು ಯಾರು? ಅಥವಾ ಆರೋಪಿಗಳೇ ಸ್ಫೋಟಕ ತಯಾರಿಸುತ್ತಿದ್ದರೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಐಎಂ ಸಂಸ್ಥಾಪಕ ಯಾಸಿನ್ ಭಟ್ಕಳ್ ಕಟ್ಟಾ ಸಹಚರನಾದ ಜೈನುಲ್ಲಾಬ್ಬೀನ್ ಆತನ ಸೂಚನೆಯಂತೆ ಸ್ಫೋಟಕ ಕೃತ್ಯಗಳಿಗೆ ಸ್ಫೋಟಕಗಳನ್ನು ರವಾನಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಜೊತೆಗೆ ಈತ ಈ ಕೃತ್ಯಕ್ಕಾಗಿ ದಕ್ಷಿಣ ಭಾರತದ ಹಲವು ಕಡೆ ತನ್ನ ಸಂಗಡಿಗರನ್ನು ನೇಮಿಸಿಕೊಂಡಿದ್ದ. 2015ರಲ್ಲಿ ಬಂಧಿತರಾಗಿರುವ ಮೂಲದ ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್, ಸದ್ದಾಂ ಹುಸೇನ್, ರಿಯಾಜ್ ಅಹಮದ್ ಸೈಯದಿ ಸಕ್ರಿಯ ಸದಸ್ಯರಾಗಿದ್ದರು.