ನವದೆಹಲಿ, ಅ 1 (Daijiworld News/RD): ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಅಂಕಿ ಅಂಶ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಎಂಟು ಪ್ರಮುಖ ಕೈಗಾರಿಕೆಗಳು ಜುಲೈನಲ್ಲಿನ ಶೇ .2.7ಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್ನಲ್ಲಿ ಶೇ .0.5 ಕ್ಕೆ ಕುಸಿದಿದೆ.
2019-20ರ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕ್ಷೇತ್ರವು ಶೇಕಡಾ 4.6 ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡಾ 5.8 ರಷ್ಟಿತ್ತು. ಸಿಮೆಂಟ್ ವಲಯವು 2019-20 ಏಪ್ರಿಲ್-ಆಗಸ್ಟ್ನಲ್ಲಿ ಶೇ.15ರಿಂದ ಶೇ. 1.3 ಕ್ಕೆ ತೀವ್ರ ಕುಸಿತ ಅನುಭವಿಸಿದೆ. ಏಪ್ರಿಲ್ನಿಂದ ಆಗಸ್ಟ್ನಲ್ಲಿ ಇದರ ಸಂಚಿತ ಬೆಳವಣಿಗೆ 2018-19ರಲ್ಲಿ ಶೇ 5.7ಕ್ಕೆ ಹೋಲಿಸಿದರೆ ಶೇಕಡಾ 2.4 ರಷ್ಟಿತ್ತು. ಉಕ್ಕಿನ ವಲಯವು 2019-20 ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಶೇಕಡಾ 3.5 ಕ್ಕೆ ಇಳಿದಿದೆ . ಏಪ್ರಿಲ್-ಆಗಸ್ಟ್ 2018-19ರಲ್ಲಿ ಶೇ.9.7ರಷ್ಟಿತ್ತು.
ಕಳೆದ ವರ್ಷ ಆಗಸ್ಟ್ ಗೆ ಹೋಲಿಸಿದರೆ ಈ ವರ್ಷ ಕಲ್ಲಿದ್ದಲು, ಉತ್ಪಾದನೆಯು ಶೇ.8.6 ಮತ್ತು ಕಚ್ಚಾ ತೈಲ ಉತ್ಪಾದನೆಯು ಶೇ.5.4 ರಷ್ಟು ಕುಸಿದ ಕಂಡಿದ್ದು, ನೈಸರ್ಗಿಕ ಅನಿಲ ಉತ್ಪಾದನೆಯು ಶೇಕಡಾ 3.9 ರಷ್ಟು ಕುಸಿದಿದ್ದರೆ, ಪೆಟ್ರೋಲಿಯಂ ಸಂಸ್ಕರಣಾಗಾರ ಉತ್ಪಾದನೆಯು ಆಗಸ್ಟ್ 2018 ಕ್ಕೆ ಹೋಲಿಸಿದರೆ ಶೇಕಡಾ 2.6 ರಷ್ಟು ಹೆಚ್ಚಾಗಿದೆ. ರಸಗೊಬ್ಬರಗಳ ಉತ್ಪಾದನೆಯು ಶೇಕಡಾ 2.9 ರಷ್ಟು ಮತ್ತು ಉಕ್ಕಿನ ಉತ್ಪಾದನೆಯು ಶೇ.5.0 ರಷ್ಟು ಹೆಚ್ಚಾಗಿದೆ.