ನವದೆಹಲಿ, ಅ 1 (Daijiworld News/RD): ಪಾಕಿಸ್ತಾನದಲ್ಲಿ ಬದುಕಲು ಕಷ್ಟವಾಗುತ್ತಿದೆ ಎಂದು ರಾಜಾಶ್ರಯ ಕೋರಿ ಭಾರತಕ್ಕೆ ಬಂದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಮಾಜಿ ಶಾಸಕರಾಗಿರುವ ಬಲದೇವ್ ಕುಮಾರ್ ಅವರ ಹತ್ಯೆಗೆ ಪಾಕಿಸ್ತಾನಿಗಳು ಸಂಚು ರೂಪಿಸಿದ್ದು, ಅವರನ್ನ ಹತ್ಯೆಗೈದವರಿಗೆ 50 ಲಕ್ಷ ರೂ ಬಹುಮಾನ ನೀಡುವುದಾಗಿ ಪಾಕ್ ಘೋಷಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಮಾಜಿ ಶಾಸಕರಾಗಿರುವ ಬಲದೇವ್ ಕುಮಾರ್ ಅವರನ್ನ ಕೊಲ್ಲಲು ಪಾಕ್ ನ ಕೆಲವು ಸಂಘಟನೆಗಳು ಸುಪಾರಿ ನೀಡಿದ್ದು, ಭಾರತದಲ್ಲಿ ಬಲದೇವ್ ಅವರನ್ನ ಹತ್ಯೆಗೈದವರಿಗೆ 50 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಎಂಬ ಅಂಶ ತಿಳಿದುಬಂದಿದೆ. ಆತನ ವಿರುದ್ಧ ಪಾಕಿಸ್ತಾನದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಪಿಟಿಐ ಪಕ್ಷದ ಮುಖಂಡ ಹಾಜಿ ನವಾಬ್ ಅವರು ಫೇಸ್ಬುಕ್ನಲ್ಲಿ ಬಲದೇವ್ ಹತ್ಯೆಗೆ ಸಂಚು ರೂಪಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಖಲಿಸ್ತಾನ್ ಪ್ರತ್ಯೇಕತಾ ಹೋರಾಟದ ಕಾರ್ಯಕರ್ತರೂ ಕೂಡ ಆಗಿರುವ ಬಲದೇವ್ ಭಾರತವು ರಾಜಕೀಯ ಆಶ್ರಯ ನೀಡುವುದನ್ನು ಅಲ್ಲಿನ ಜನ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಿವಾರ್ಯವಾಗಿ ಆತ ಪಾಕಿಸ್ತಾನಕ್ಕೆ ಮರಳಬೇಕು. ಇಲ್ಲಿಯ ಗಡಿಭಾಗಕ್ಕೆ ಬರುತ್ತಿದ್ದಂತೆಯೇ ಆತನನ್ನು ನಾವು ಮುಗಿಸುತ್ತೇನೆ ಎಂದು ಗೋಪಾಲ್ ಸಿಂಗ್ ಚಾವ್ಲಾ ಎಂಬ ಖಲಿಸ್ತಾನ್ ಬೆಂಬಲಿಗ ಎಚ್ಚರಿಕೆ ನೀಡಿದ್ದಾನೆ.
ಪಾಕಿಸ್ತಾನದಲ್ಲಿ ಬದುಕಲು ಕಷ್ಟವಾಗುತ್ತಿದೆ ಎಂದು ಅಳಲುತೋಡಿಕೊಂಡು ರಾಜಾಶ್ರಯ ಕೋರಿ ಬಂದಿದ್ದ, 43 ವರ್ಷದ ಬಲದೇವ್ ಕುಮಾರ್, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದರು. ಸದ್ಯಕ್ಕೆ ಪಂಜಾಬ್ ನ ಲೂಧಿಯಾನ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಈ ಪಾಕ್ ಹಿಂದೂ ಕುಟುಂಬವು ಭಾರತದಲ್ಲಿ ರಾಜಾಶ್ರಯಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು.