ಬೆಂಗಳೂರು, ಅ 2 (Daijiworld News/RD): ನಗರದ ಐಪಿಎಸ್ ಅಧಿಕಾರಿಯೊಬ್ಬರು ವರ್ಗಾವಣೆಗೊಂಡಿದ್ದು, ಹೀಗಾಗಿ ತಮ್ಮ ಮನೆಯ ವಸ್ತುಗಳನ್ನು ಬೇರೆ ಕಡೆ ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಕೆ ಮಾಡುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕ್ರೈಂ ಡಿಸಿಪಿ ಆಗಿದ್ದ ಕುಲದೀಪ್ ಕುಮಾರ್ ಆರ್ ಜೈನ್, ಕೆಎಸ್ಆರ್ ಪಿ ವಾಹನದ ಜೊತೆಗೆ ಪೊಲೀಸರಿಗೆ ಆಂಬ್ಯುಲೆನ್ಸ್ ನೀಡಲಾಗಿತ್ತು. ಇದೀಗ ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಸರ್ಕಾರಿ ವಾಹನವನ್ನು ಬಳಸಿಕೊಂಡಿದ್ದಾರೆ. ಇತ್ತೀಚೆಗೆ ಕುಲದೀಪ್ ಕುಮಾರ್ ಆರ್ ಜೈನ್ ಸಿಸಿಬಿ ಕ್ರೈಂ ಒನ್ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದು, ಶಿವಾಜಿನಗರದ ಮೋತಿ ಮಸೀದಿ ಪಕ್ಕದಲ್ಲಿರುವ ಸರ್ಕಾರಿ ಬಂಗಲೆಗೆ ಶಿಫ್ಟ್ ಆಗಬೇಕಿತ್ತು. ಈ ವೇಳೆ ಮನೆಯ ವಸ್ತುಗಳನ್ನು ರವಾನಿಸಲು ವಾಹನ ಬೇಕಾಗಿದ್ದು, ಈ ವೇಳೆ ಅಧಿಕಾರಿ ಆಂಬ್ಯುಲೆನ್ಸ್ ಬಳಸುವ ಮೂಲಕ ಸರ್ಕಾರಿ ವಾಹನವನ್ನು ಬಳಸಿಕೊಂಡಿದ್ದಾರೆ.
ಪೊಲೀಸರ ಜೀವ ರಕ್ಷಕ ಆಂಬ್ಯುಲೆನ್ಸ್ ಅನ್ನು ಮನೆ ಶಿಫ್ಟ್ ಮಾಡೊದಕ್ಕೆ ಬಳಸಿದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.