ಬೆಂಗಳೂರು, ಅ 2 (Daijiworld News/RD): 2019-20ರ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ದಿನಾಂಕ ನಿಗದಿಪಡಿಸಿದ್ದು, ಇದೀಗ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ದಪಡಿಸಿದೆ.
ಇದರ ಪ್ರಕಾರ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯು ಮಾರ್ಚ್ 4 ಇತಿಹಾಸ, ಭೌತಶಾಸ್ತ್ರ, ಮೂಲ ಗಣಿತ, ಮಾ.5 ತಮಿಳು, ತೆಲುಗು,ಮಲೆಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್, ಮಾ.6 ಉರ್ದು, ಸಂಸ್ಕೃತ, ಮಾ.7 ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾ.9 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಗಣಿತ, ಮಾ.11 ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, ಮಾ.12 ಬಿಜಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾ.13 ಭೂಗೋಳಶಾಸ್ತ್ರ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ.
ಮಾ.14 ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ, ಮಾ.16 ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾ.17 ಹಿಂದಿ, ಮಾ.18 ಕನ್ನಡ ಮತ್ತು ಮಾ.19 ಇಂಗ್ಲಿಷ್ ಭಾಷಾ ಪರೀಕ್ಷೆಗಳು ನಡೆಯಲಿವೆ.
ತಾತ್ಕಾಲಿಕ ವೇಳಾಪಟ್ಟಿಗೆ ಬರುವ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ, ಪದವಿಪೂರ್ವ ಶಿಕ್ಷಣ ಇಲಾಖೆಯೂ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ