ನವದೆಹಲಿ, ಅ 02 (DaijiworldNews/SM): ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆಯನ್ನು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಆಕ್ರೋಶಗೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡ್ಡೆಯುತ್ತಿರುವ ಘಟನೆಗಳಿಂದ ಗಾಂಧೀಜಿ ಅವರ ಆತ್ಮ ನೆಮ್ಮದಿ ಕಳೆದುಕೊಂಡಿರಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಗಾಂಧೀಜಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದ ಸೋನಿಯಾ, ಕೆಲವರಿಗೆ ಆರ್ ಎಸ್ ಎಸ್ ಮಾತ್ರವೇ ಬೇಕು. ಈ ಕಾರಣದಿಂದಾಗಿ ಗಾಂಧೀಜಿಯವರನ್ನು ಧ್ವೇಶಿಸುತ್ತಿದ್ದಾರೆ. ಇಂತಹ ಜನರಿಂದ ದೇಶದ ವೈವಿದ್ಯತೆಗೆ ಘಾಸಿಯಾಗಲಿದೆ ಎಂದರು. ಗಾಂಧೀಜಿಯವರು ಎಂದಿಗೂ ಸತ್ಯಕ್ಕೆ ಬದ್ಧರಾಗಿದ್ದರು. ಆದರೆ, ಈಗಿನ ರಾಜಕಾರಣಿಗಳು ತಮ್ಮನ್ನು ಮಹಾತ್ಮಾ ಗಾಂಧೀಜಿಯ ಸಿದ್ಧಾಂತಗಳಿಗಿಂತ ದೊಡ್ಡವರೆಂದು ಭಾವಿಸುತ್ತಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.