ಬೆಂಗಳೂರು, ಅ.03(Daijiworld News/SS): ನೆರೆ ಪರಿಹಾರಕ್ಕೆ ಯಾರ ಪ್ರಭಾವವೂ ಬೇಕಿಲ್ಲ ಎಂದು ವಿರೋಧ ಪಕ್ಷಗಳ ನಾಯಕರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಬಳಿ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲ ಎಂದಾದಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ನಾನು ಮಾತನಾಡುತ್ತೇನೆಂದು ಹೇಳಿದ್ದರು. ಮಾತ್ರವಲ್ಲ ಹೆಚ್.ಡಿ.ರೇವಣ್ಣ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರು.
ಇದೀಗ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ಅವರು ತಿರುಗೇಟು ನೀಡಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ಯಾವ ಪಕ್ಷದವರೂ ಗೊಂದಲ ಉಂಟು ಮಾಡುವ ಅಗತ್ಯವಿಲ್ಲ ಯಾರೂ ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ಧಿವಂತರಾಗಿದ್ದು, ಅವರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದಿದೆ. ಶೀಘ್ರದಲ್ಲಿಯೇ ಪರಿಹಾರ ಘೋಷಣೆ ಮಾಡುತ್ತಾರೆ. ನಾನು ಅಮಿತ್ ಶಾ ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿ ಬಂದಿದ್ದೇನೆಂದು ತಿಳಿಸಿದ್ದಾರೆ.
ನೆರೆ ಪರಿಹಾರಕ್ಕೆ ಯಾರ ಪ್ರಭಾವವೂ ಬೇಕಿಲ್ಲ. ಯಾವ ಪಕ್ಷದವರೂ ಗೊಂಬಲ ಉಂಟು ಮಾಡುವ ಅಗತ್ಯವಿಲ್ಲ ಶೀಘ್ರದಲ್ಲಿಯೇ ಕೇಂದ್ರ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ತಿರುಗೇಟು ನೀಡಿದ್ದಾರೆ.