ಮೂಡಿಗೆರೆ, ಅ 3 (Daijiworld News/RD): ಪ್ರವಾಹದಿಂದ ಗದ್ದೆ, ತೋಟವನ್ನು ಕಳೆದುಕೊಂಡಿದ್ದು ಕೃಷಿಗೆ ಮಾಡಿದ ಸಾಲ ತೀರಿಸಲಾಗದೇ ಇದೀಗ ಸರಕಾರದಿಂದ ಏನೂ ಪರಿಹಾರ ಕೂಡಾ ಸಿಗದೇ ಬೇಸರ, ಹತಾಶೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಮೇಗಲ್ ಗ್ರಾಮದಲ್ಲಿ ನಡೆದಿದೆ.
ಚಂದ್ರೇಗೌಡ (55) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ.
ಜಲಪ್ರವಾಹದ ಸಂದರ್ಭದಲ್ಲಿ ಚಂದ್ರೇಗೌಡ ಅವರ ಅರ್ಧ ಎಕರೆ ಭತ್ತದ ಗದ್ದೆ, ಅರ್ಧ ಎಕರೆ ಕಾಫಿ ತೋಟ ಕೊಚ್ಚಿ ಹೋಗಿತ್ತು. ತೋಟ ಸರಿಪಡಿಸಲೆಂದು ಅವರು ಕೈ ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗದೇ ಇದೀಗ ಸರಕಾರದಿಂದ ಏನೂ ಪರಿಹಾರ ಕೂಡಾ ಸಿಗದೇ ಬೇಸರ, ಹತಾಶೆಯಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯ ಸರಕಾರ, ಕೇಂದ್ರ ಸರಕಾರ ಇವರೆಲ್ಲರ ಮತ ಪಡೆದು ಇದೀಗ ದುರಂತಕ್ಕೆ ಯಾವುದೇ ಪರಿಹಾರ ನೀಡದೇ ಪರಸ್ಪರ ದೋಷಾರೋಪಣೆ ಮಾಡುತ್ತಾ ಕಾಲಹರಣ ಮಾಡುತ್ತಿದೆ.