ಬೆಂಗಳೂರು, ಅ 3 (Daijiworld News/RD): ಪ್ರತ್ರೀ ಬಾರಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪರವಾಗಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಇದಕ್ಕೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಹೇಳುವ ಮೂಲಕ ಖಾರವಾಗಿ ಟೀಕಿಸಿರುವುದಕ್ಕೆ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ನೆರೆ ಬಾಧಿತ ಪ್ರದೇಶಕ್ಕೆ ಕೇಂದ್ರ ಸರಕಾರದ ಪರಿಹಾರ ತರಲು ಸಂಸದರು ಹಾಗೂ ಕೇಂದ್ರ ಸಚಿವರು ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಸೂಲಿಬೆಲೆ ಪ್ರಶ್ನಿಸಿದ್ದರು. ಆದರೆ, ಈ ಕಾರಣಕ್ಕಾಗಿ ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ದೇಶದ್ರೋಹಿ ಎಂದು ಸದಾನಂದ ಗೌಡ ಪರೋಕ್ಷವಾಗಿ ಟೀಕಿಸಿರುವುದಕ್ಕೆ ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಗರಂ ಆಗಿರುವ ಸದಾನಂದ ಗೌಡರು, ಸೂಲಿಬೆಲೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೇ ಭಾಷಣ ಮಾಡಿ ಚಪ್ಪಾಳೆಗಿಟ್ಟಿಸಿಕೊಂಡು ದೇಶ ಕಟ್ಟುತ್ತಿದ್ದೇನೆ ಎಂದು ಮಾತನಾಡುವುದು ಸರಿಯಲ್ಲ. 25 ಸಂಸದರು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂಬಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಟ್ವಿಟ್ ಮಾಡಿದ್ದರು.
ಇದೀಗ ಸೂಲಿಬೆಲೆ ಮತ್ತು ಸಚಿವರ ನಡುವಿನ ಸಂಘರ್ಷವು ಬಿಜೆಪಿಯ ಟೀಕಾಕಾರಿಗೆ ಅಸ್ತ್ರವಾಗಿ ಪರಿಣಮಿಸಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರು ಸಾಮಾಜಿಕ ಜಾಲಾತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಯೋಗ್ಯತೆ ಸ್ಪಷ್ಟವಾಯಿತು ಹಿಂದೊಮ್ಮೆ ನಾನು ನನ್ನ ಜಾತಿಯಿಂದಾನೆ ಗೆದ್ದಿದ್ದು, ಮಂತ್ರಿ ಆಗಿದ್ದು ಅಂತ ಹೇಳಿದ ಗೌಡ್ರು, ಇವತ್ತು ಚಕ್ರವರ್ತಿ ಅಣ್ಣನನ್ನು ದೇಶದ್ರೋಹಿ ಅಂದಿದ್ರಲ್ಲಿ ಅಚ್ಚರಿ ಏನಿಲ್ಲ. ಜಾತಿವಾದಿ ಆದ ನಿಮಗೆ ರಾಷ್ಟ್ರವಾದಿಗಳೆಲ್ಲರೂ ದೇಶದ್ರೋಹಿಗಳ ಥರಾನೆ ಕಾಣ್ತಾರೆ ಬಿಡಿ. ನಿಮ್ಮ ಯೋಗ್ಯತೆ ಗೊತ್ತಾಗಿತ್ತು. ಮತ್ತೊಮ್ಮೆ ಸ್ಪಷ್ಟವಾಯ್ತು ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಥೂ ನಿಮ್ಮ ನಾಚಿಕೆ ಅಗೊಲ್ವ? ಅನಂತಕುಮಾರ್ ಕೇಂದ್ರದ ಮಂತ್ರಿ ಆಗಿದ್ದಾಗ ಕರ್ನಾಟಕದ ಬಗ್ಗೆ ದ್ವನಿಯಾಗಿದ್ದರು. ನಿಮಗೇನು ದೊಡ್ಡ ರೋಗ? ಕರ್ನಾಟಕದ ನೆರೆ ಪರಿಹಾರ ಕೇಳೋಕೆ ಧೈರ್ಯ ಇಲ್ಲದೇ ಇರೋ 25 ಸಂಸದರು ಇದ್ದೂ ಇಲ್ಲದೆ ಇರೋ ಹಾಗೇ. ಸ್ಮೈಲ್ ಗೌಡ್ರೆ, ಬೇರೆಯವರ ಸಮರ್ಥನೆ ಮಾಡೋದು ಬಿಟ್ಟು ನಮ್ಮ ಕನ್ನಡಿಗರ ಬಗ್ಗೆ ಯೋಚ್ನೆ ಮಾಡಿ ಎಂದು ಹೇಳುವ ಮೂಲಕ ಸಾಮಾಜಿಕ ಜಾಲಾತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.