ನವದೆಹಲಿ, ಅ.04(Daijiworld News/SS): ಮಾರಿಷಸ್'ನ ಎರಡು ಮಹತ್ವದ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗನ್ನಾಥ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
ಮೆಟ್ರೋ ಎಕ್ಸ್'ಪ್ರೆಸ್ ರೈಲಿನ ಮೊದಲ ಹಂತ ಮತ್ತು ಹೊಸ ಇ ಎನ್ ಟಿ-ಕಿವಿ ಗಂಟಲು ಮತ್ತು ಗಂಟಲು ಹೊಸ ಆಸ್ಪತ್ರೆಯನ್ನು ಉಭಯ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಯೋಜನೆಗಳು ಮಾರಿಷಸ್ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ಇದು ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಭಾರತದ ಸಂಕೇತ ಎಂದು ಹೇಳಿದ್ದಾರೆ.
ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗನ್ನಾಥ್ ಭಾರತಕ್ಕೆ ಚಿರಋಣಿಯಾಗಿರುವುದಾಗಿ ಹೇಳಿದ್ದಾರೆ. ಮಾರಿಷಸ್ ಅಭಿವೃದ್ಧಿಗೆ ಭಾರತ ಮಾತೆಯ ಆಶೀರ್ವಾದ ಅಗತ್ಯವಿದೆ ಎಂದು ನುಡಿದರು.