ನವದೆಹಲಿ, ಅ.04(Daijiworld News/SS): ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ದೇಶದ ರಾಜಧಾನಿ ಹೊಸದಿಲ್ಲಿಯೊಳಗೆ ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ.
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಭಾರತದ ವಿರುದ್ಧ ಆಕ್ರೋಶಗೊಂಡಿರುವ ಉಗ್ರರು, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಪ್ರಬಲವಾಗಿದೆ. ಮಸೂದ್ ಅಜರ್ ಮತ್ತು ಆತನ ಸಹಚರರು ವಿಧ್ವಸಂಕ ಕೃತ್ಯ ಸಂಚು ನಡೆಸಿದ್ದಾರೆಂದು ಕಳೆದ ಒಂದು ವಾರದಿಂದ ಗುಪ್ತಚರ ಇಲಾಖೆಗೆ ಮಾಹಿತಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ 30 ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಶ್ರೀನಗರ, ಅವಂತಿಪೋರಾ, ಜಮ್ಮು ಪಠಾಣ್ಕೋಟ್, ಹಿಂಡನ್ ವಾಯುನೆಲೆಗಳಲ್ಲಿ ‘ಆರೆಂಜ್ ಅಲರ್ಟ್’ ಸೂಚಿಸಲಾಗಿದೆ. ವಾಯುಪಡೆಯ ಮುಂಚೂಣಿ ನೆಲೆಗಳಿಗೆ ಜಾಗೃತವಾಗಿರುವಂತೆ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಜೈಷ್ ಉಗ್ರರು ಏರ್ಬಸ್ಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿರುವ ಕುರಿತು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊಗೆ ಸೆ.10ರಂದು ದೊರೆತಿರುವ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.